LATEST NEWS
ಯೂರಿಯಾ ಉತ್ಪಾದನೆಗೆ ಮೂತ್ರ ಬ್ಯಾಂಕ್ – ಸಚಿವ ಗಡ್ಕರಿ ಹೇಳಿಕೆ

ಯೂರಿಯಾ ಉತ್ಪಾದನೆಗೆ ಮೂತ್ರ ಬ್ಯಾಂಕ್ – ಸಚಿವ ಗಡ್ಕರಿ ಹೇಳಿಕೆ
ನವದೆಹಲಿ ನವೆಂಬರ್ 14: ದೇಶದಲ್ಲಿ ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಸಲುವಾಗಿ ದೇಶದ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ಮೂತ್ರ ಬ್ಯಾಂಕ್ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಮಾನವನ ಮೂತ್ರದಲ್ಲಿ ಸಾಕಷ್ಟು ನೈಟ್ರೋಜನ್ ಇದ್ದು ಇದು ವ್ಯರ್ಥವಾಗುತ್ತಿದೆ. ಈ ಹಿನ್ನಲೆಯಲ್ಲಿ ಈ ತ್ಯಾಜ್ಯವನ್ನು ಸರಿಯಾಗಿ ಉಪಯೋಗ ಮಾಡಬೇಕಿದೆ ಎಂದ ಅವರು , ಈ ಯೋಜನೆಯ ಪ್ರಯೋಗ ಮಾಡುವುದರಿಂದ ಯಾವುದೇ ಅಪಾಯವಿರದೆಂದು ನಾನು ಭಾವಿಸುತ್ತೇನೆ’ ಎಂದು ಗಡ್ಕರಿ ಹೇಳಿದ್ದಾರೆ.

ರೈತರು ಕ್ಯಾನ್ಗಳಲ್ಲಿ 10 ಲೀಟರ್ಗಳಷ್ಟು ಮೂತ್ರ ಸಂಗ್ರಹಿಸಿ ತಾಲ್ಲೂಕು ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಕೊಡಬೇಕು. ಅವರಿಗೆ ಪ್ರತಿ ಲೀಟರ್ಗೆ 1 ರಂತೆ ನೀಡಲಾಗುವುದು. ಸ್ವೀಡನ್ನ ವಿಜ್ಞಾನಿಗಳ ಸಹಯೋಗದೊಂದಿಗೆ ಈ ಯೋಜನೆ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಆರಂಭದಲ್ಲಿ ನಾಗ್ಪುರದ ದಾಪೇವಾಡ ಹಳ್ಳಿಯಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.