LATEST NEWS
ಮುಸ್ಲಿಂರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಹೇಳಿಕೆಗೆ ಬದ್ದ – ಗೋಪಾಲ್ ಜೀ
ಮುಸ್ಲಿಂರಿಗೆ ಮದುವೆಯಾಗಲು ಹೆಣ್ಣು ಸಿಗುವುದಿಲ್ಲ ಹೇಳಿಕೆಗೆ ಬದ್ದ – ಗೋಪಾಲ್ ಜೀ
ಉಡುಪಿ ನವೆಂಬರ್ 27: ವಿರಾಟ್ ಹಿಂದೂ ಸಮಾಜೋತ್ಸವ ಲವ್ ಜಿಹಾದ್ ನಿಲ್ಲಿಸದಿದ್ದರೆ ಮುಸ್ಲಿಂರಿಗೆ ಮದುವೆಯಾಗಲು ಹೆಣ್ಣುಗಳು ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ವಿಶ್ವಹಿಂದೂ ಪರಿಷತ್ ಸಂಘಟನಾ ಕಾರ್ಯದರ್ಶಿ ಗೋಪಾಲ್ ಜೀ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಇಂದು ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೋಪಾಲ್ ಜೀ ಈಗಲೂ ಲವ್ ಜಿಹಾದ್ ನಿಲ್ಲಿಸದಿದ್ದರೆ ನಮ್ಮ ನಿಲುವಿಗೆ ಬದ್ಧ ಎಂದು ಸ್ಪಷ್ಟಪಡಿಸಿದರು. ಬಲವಂತದಿಂದ ಹಾಗೂ ಮೋಸದ ಮತಾಂತರವನ್ನು ವಿಶ್ವಹಿಂದೂ ಪರಿಷತ್ ಒಪ್ಪಲ್ಲ ಎಂದು ಹೇಳಿದ ಅವರು ಅನಿವಾರ್ಯವಾದರೆ ನಾವು ಕ್ರಮಕ್ಕೆ ಇಳಿಯಲೇಬೇಕಾಗುತ್ತದೆ ಎಂದು ಹೇಳಿದರು.
ಜನಸಂಖ್ಯೆ ಭಾರತಕ್ಕೆ ಭಾರವಲ್ಲ ಎಂದ ಅವರು ಈಗ ಯಾವುದೇ ದೇಶಕ್ಕೆ ಜನಸಂಖ್ಯೆ ಶಾಪವಾಗಿ ಉಳಿದಿಲ್ಲ, ಜನಸಂಖ್ಯೆ ಹೆಚ್ಚಾದರೆ ದೇಶಕ್ಕೆ ಆಸ್ತಿ ಎಂದರು. ಆದರೆ ಹತ್ತೆಂಟು ಮಕ್ಕಳನ್ನು ಪಡೆಯಲಿ ಎಂದೂ ಯಾರೂ ಹೇಳಲ್ಲ.
ಧರ್ಮ ಸಂಸದ್ ನಲ್ಲಿ ಹಿಂದೂಗಳು ನಾಲ್ಕು ಮಕ್ಕಳನ್ನು ಪಡೆಯಬೇಕು ಎಂದು ಹೇಳಿಕೆ ನೀಡಿದ ಸ್ವಾಮಿಜಿಯವರನ್ನು ಸಮರ್ಥಿಸಿದ ಗೋಪಾಲ್ ಜೀ ಇದೊಂದು ಪ್ರತಿಕ್ರಿಯಾತ್ಮಕ ಸಂಗತಿಯಷ್ಟೇ ಒಳಗಿನ ಭಾವನೆಯಲ್ಲ ಎಂದರು. ಎರಡರ ಬದಲು ಮೂರು ಮಕ್ಕಳು ಪಡೆಯಲಿ ಎಂದು ನಾವೂ ಆಶಿಸುವೆವು ಎಂದರು.