LATEST NEWS
ಮುಂಬಯಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿದಿನ 1.5 ಕೊಟಿ ರೂಪಾಯಿ ಹಫ್ತಾ
ಮುಂಬಯಿ ಬೀದಿ ಬದಿ ವ್ಯಾಪಾರಿಗಳಿಂದ ಪ್ರತಿದಿನ 1.5 ಕೊಟಿ ರೂಪಾಯಿ ಹಫ್ತಾ
ಮುಂಬೈ ನವೆಂಬರ್ 23 :- ಮುಂಬಯಿಯ ಪಾಲಿಕೆ ಅಧಿಕಾರಿಗಳಿಗೆ ಪ್ರತಿ ದಿನ 1.5 ಕೋಟಿ ರೂಪಾಯಿ ಹಫ್ತಾ ಸಂದಾಯವಾಗುತ್ತದೆ ಎಂಬ ಭಯಾನಕ ಸತ್ಯ ಹೊರಗೆ ಬಂದಿದೆ. ಈ ಹಸ್ತವನ್ನು ಕೊಡುತ್ತಿರುವವರು ಮುಂಬಯಿಯ ಬೀದಿ ಬದಿಯ ವ್ಯಾಪಾರಿಗಳು.
ತಮ್ಮ ಬೀದಿ ಬದಿಯ ವ್ಯಾಪಾರವನ್ನು ರಕ್ಷಿಸಿಕೊಳ್ಳಲು ಪ್ರತಿದಿನ 20 ರಿಂದ 100 ರೂಪಾಯಿ ಮುಂಬಯಿ ಪಾಲಿಕೆಯ ಅತಿಕ್ರಮಣ ನಿಯಂತ್ರಣ ದಳದ ಅಧಿಕಾರಿಗಳಿಗೆ ನೀಡುತ್ತಿದಾರೆಂಬ ಮಾಹಿತಿ ಬಹಿರಂಗವಾಗಿದೆ. ಮುಂಬಯಿ ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡಿನಲ್ಲಿಯೂ ಅತಿಕ್ರಮಣ ನಿಯಂತ್ರಣ ದಳವಿದ್ದು ಮೂರ್ನಾಲ್ಕು ದಿನಗಳಿಗೊಮ್ಮೆ ವಾರಕ್ಕೊಮ್ಮೆ ನೆಪಮಾತ್ರಕ್ಕಾಗಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆ ಕೈಗೊಳ್ಳುತ್ತದೆ.
ಈ ತೆರವು ಕಾರ್ಯಾಚರಣೆ ಆರಂಭಿಸುವ ಸುಮಾರು ಅರ್ಧ ತಾಸು ಮುನ್ನ ಬೀದಿ ವ್ಯಾಪಾರಿಗಳಿಗೆ ಸೂಚನೆ ಬರುತ್ತದೆ ತಕ್ಷಣವೇ ವ್ಯಾಪಾರಿಗಳು ತಮ್ಮ ಸಾಮಾನುಗಳನ್ನು ಚೀಲಗಳಲ್ಲಿ ತುಂಬಿಸಿ ಜಾಗವನ್ನು ಖಾಲಿ ಮಾಡುತ್ತಾರೆ. ಮುಂಬಯಿ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು ಮೂರು ಲಕ್ಷದಷ್ಟು ಬೀದಿ ವ್ಯಾಪಾರಿಗಳಿದ್ದು ದಿನವಾಹಿ ಸುಮಾರು 120 ಕೋಟಿ ವ್ಯವಹಾರ ನಡೆಸುತ್ತಾರೆ.
ಈ ವ್ಯಾಪಾರಿಗಳಿಂದ ಹಫ್ತಾ ವಸೂಲಿಗಾಗಿ ಕೆಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು ಇವರು ದಿನವಾಹಿ ವ್ಯಾಪಾರಿಗಳಿಂದ ಹಣವನ್ನು ವಸೂಲು ಮಾಡಿ ಅದನ್ನು ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸುತಾರೆ. ಕೆಲವು ಮಾರುಕಟ್ಟೆಗಳಲ್ಲಿ ವಾರಕ್ಕೊಮ್ಮೆ ವ್ಯಾಪಾರಿಗಳನ್ನು ಹಪ್ತಾ ಪಾವತಿಯಾಗುತ್ತಿದ್ದರೆ ಇತರ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ದಿನನಿತ್ಯ ಹಪ್ತಾವನ್ನು ನೀಡುತ್ತಿದ್ದಾರೆ ಅಷ್ಟೇ ಅಲ್ಲದೆ ಹಪ್ತ ಪ್ರಮಾಣ ದ ಪ್ರಮಾಣ ಒಂದು ಮಾರುಕಟ್ಟೆಯಿಂದ ಮತ್ತೊಂದು ಮಾರುಕಟ್ಟೆಗೆ ಬದಲಾಗಿರುತದೆ.
ಚರ್ಚ್ ಗೇಟ್ ನಿಲ್ದಾಣದಿಂದ ಛತ್ರಪತಿ ಶಿವಾಜಿ ಟರ್ಮಿನಸ್ ವರೆಗಿನ ರಸ್ತೆ ಬದಿಯಲ್ಲಿನ ವ್ಯಾಪಾರಿಗಳು ಪ್ರತಿ ನಿತ್ಯ ಐವತ್ತು ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ ಪ್ರತಿನಿತ್ಯದ ಪಾವತಿಯ ಹೊರತಾಗಿಯೂ ಪಾಲಿಕೆ ವಾಹನ ಕಂಡು ಬಂದಲ್ಲಿ ವ್ಯಾಪಾರಿಗಳು ತಮ್ಮ ಸಾಮಾನು, ಸರಂಜಾಮುಗಳೊಂದಿಗೆ ಜಾಗ ಖಾಲಿ ಮಾಡಲೇಬೇಕು.
ತಮ್ಮ ವ್ಯಾಪಾರದ ಬಗ್ಗೆ ಖಾತರಿ ಇಲ್ಲವಾಗಿದ್ದರೂ ದಿನನಿತ್ಯ ಹಸ್ತವನ್ನು ಪಾವತಿಸುವುದು ಅನಿವಾರ್ಯವಾಗಿದೆ. ಕೆಲವು ಬಾರಿ ಎರಡೆರಡು ತಂಡಗಳಿಗೂ ಆಪ್ತ ನೀಡಬೇಕಾಗುತ್ತದೆ ಎಂದು ನಗರದ ಫೋರ್ಟ್ ಪ್ರದೇಶದ ಬೀದಿ ಬದಿ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಒಟ್ಟಾರೆಯಾಗಿ ಭ್ರಷ್ಟಾಚಾರ ರಹಿತ ಆಡಳಿತ ಎಂದು ಹೇಳುತ್ತಿರುವ ಬಿಜೆಪಿ ಆಡಳಿತವಿರುವ ಮುಂಬಯಿಯಲ್ಲಿ ಈ ಬಗೆಯ ಭ್ರಷ್ಟಾಚಾರ ನಡೆಯುತ್ತಿರುವುದು ವಿಪರ್ಯಾಸವೇ ಸರಿ.