Connect with us

LATEST NEWS

ಮಹಿಳೆಯರೇ ಕಾಂಗ್ರೇಸ್ ನಿಂದ ದೂರ ಇರಿ – ಯಡಿಯೂರಪ್ಪ

ಮಹಿಳೆಯರೇ ಕಾಂಗ್ರೇಸ್ ನಿಂದ ದೂರ ಇರಿ – ಯಡಿಯೂರಪ್ಪ

ಸುಳ್ಯ ನವೆಂಬರ್ 10: ರಾಜ್ಯ ಕಾಂಗ್ರೇಸ್ ಪಕ್ಷದ ರಾಜ್ಯದ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಒಬ್ಬ ಅತ್ಯಾಚಾರಿಯಾಗಿದ್ದು, ಆತ ರಾಜ್ಯದ ಎಲ್ಲೇ ಬಂದರು ಆತನಿಗೆ ಮುತ್ತಿಗೆ ಹಾಕಲು ಬಿಜಿಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಸುಳ್ಯದಲ್ಲಿ ನಡೆದ ಬಿಜೆಪಿ ನವ ಕರ್ನಾಟಕ ಪರಿವರ್ತನಾ ರಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಕೇರಳದಲ್ಲಿ ನಡೆದ ಸೋಲಾರ್ ಹಗರಣದಲ್ಲಿ ಭಾಗಿಯಾಗಿರುವ ವೇಣುಗೋಪಾಲ್ ಇದೀಗ ರಾಜ್ಯ ಕಾಂಗ್ರೇಸ್ ನ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಆದರೆ ಆತ ಸರಿತಾ ನಾಯರ್ ಎನ್ನುವ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ಇದೀಗ ತನಿಖೆಯಿಂದ ಸಾಬೀತಾಗಿದೆ. ಇಂತಹವರನ್ನು ಹೊಂದಿರುವ ಕಾಂಗ್ರೇಸ್ ಪಕ್ಷದಿಂದ ಮಹಿಳೆಯರು ದೂರವಿರಬೇಕು ಎಂದರು.

ವೇಣುಗೋಪಾಲ್ ರಾಜ್ಯದ ಎಲ್ಲೇ ಬಂದರೂ ಆತನಿಗೆ ಮುತ್ತಿಗೆ ಹಾಕುವ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ನಡೆಸಬೇಕು ಎಂದು ಕರೆ ನೀಡಿದರು. ಸಿದ್ಧರಾಮಯ್ಯನಂಥ ಅಯೋಗ್ಯ ಮುಖ್ಯಮಂತ್ರಿ ಯನ್ನು ಯಾವತ್ತೂ ನೋಡಿಲ್ಲ ಎಂದ ಅವರು ಧರ್ಮಸ್ಥಳದಂತಹ ಕ್ಷೇತ್ರಕ್ಕೆ ತೆರಳಿ ಅಪವಿತ್ರಗೊಳಿಸಿದ ವ್ಯಕ್ತಿ ಆತ ಎಂದ ಏಕವಚನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರನ್ನು ತರಾಟೆಗೆ ತೆಗೆದುಕೊಂಡರು.

ಜಿಎಸ್ ಟಿ ಸಭೆಯಲ್ಲಿ ಭಾಗಿಯಾಗದೇ ಮುಖ್ಯಮಂತ್ರಿಯಿಂದ ರಾಜ್ಯದ ಜನತೆಗೆ ಮೋಸ

ಜಿಎಸ್ಟಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದಿನವರೆಗೂ ಭಾಗವಹಿಸಿಲ್ಲ. ಇದರಿಂದಾಗಿ ರಾಜ್ಯದ ಜನತೆ ಜಿಎಸ್ಟಿಯಿಂದ ಸಿಗುವ ಲಾಭವನ್ನು ಪಡೆಯಲು ವಿಪಲವಾಗುವಂತಾಗಿದೆ ಎಂದು ಆರೋಪಿಸಿದ ಅವರು ಕೇಂದ್ರ ಸರಕಾರ ರಾಜ್ಯಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನೀಡುತ್ತಿದೆ.ಆದರೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದರು.

ಪರಿವರ್ತನಾ ಯಾತ್ರೆಯಲ್ಲಿ 10 ಸಾವಿರಕ್ಕೂ ಮಿಕ್ಕಿದ ಜನ ಸೇರಿದ್ದರು. ಕಾರ್ಯಕ್ರಮಕ್ಕೆ ಮೊದಲು ಸುಳ್ಯದ ಜ್ಯೋತಿ ವೃತ್ತದಿಂದ ಕಾರ್ಯಕ್ರಮ ನಡೆಯುವ ಚೆನ್ನಕೇಶ್ವರ ದೇವಸ್ಥಾನದ ಮೈದಾನದ ವರೆಗೂ ಮೆರವಣಿಗೆ ಯನ್ನೂ ನೆಡಸಲಾಯಿತು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *