ಮಳೆಗಾಲಕ್ಕೆ ಒಂದಷ್ಟು ಹೆಲ್ತ್ ಟಿಪ್ಸ್…
ಮಳೆಗಾಲ ಆರಂಭವಾಗಿದೆ. ಮಳೆ ಬಂತೆಂದರೆ ಶೀತ,ನೆಗಡಿ ಸಂಬಂಧಿ ಖಾಯಿಲೆಗಳೂ ಗ್ಯಾರಂಟಿ. ಹಾಗಾಗಿ ಮಳೆಗಾಲದಲ್ಲಿ ಬೆಚ್ಚಗಾಗಿಸಲು ಏನೇನು ಆಹಾರ ಸೇವಿಸಿದರೆ ಒಳಿತು ಇಲ್ಲಿ ನೋಡಿ…. ಆದಷ್ಟು ಕಿತ್ತಳೆ, ಮಾವಿನ ಹಣ್ಣು, ಆಪಲ್ ನಂತಹ ಹಣ್ಣುಗಳ ಸೇವನೆ ಮಾಡಿ. ಆದಷ್ಟು ಸೀಸನಲ್ ಹಣ್ಣುಗಳನ್ನು ಸೇವಿಸಿ.
· ಸೊಪ್ಪು ತರಕಾರಿಗಳು ಶೀತ ಪ್ರಕೃತಿ ಹೊಂದಿರುವುದರಿಂದ ಹಾಗಲಕಾಯಿಯಂತಹ ತರಕಾರಿಗಳನ್ನು ಹೆಚ್ಚು ಸೇವಿಸಿ.
· ಯಾವುದೇ ತರಕಾರಿಗಳನ್ನು ಚೆನ್ನಾಗಿ ಬೇಯಿಸಿ ತಿನ್ನಿ. ಮಳೆಗಾಲದಲ್ಲಿ ಹಸಿ ತರಕಾರಿ ಸೇವನೆ ಆದಷ್ಟು ಕಡಿಮೆ ಮಾಡಿ. ಚಳಿ ವಾತಾವರಣದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುವ ಕಾರಣ ಕರಿದ ಪದಾರ್ಥಗಳನ್ನು ಸ್ವಲ್ಪ ದೂರವಿರಿಸಿ.ಬಿಸಿ ಬಿಸಿಯಾದ ಸೂಪ್ ಮಾಡಿ ಕಾಳು ಮೆಣಸು ಸೇರಿಸಿ ಸೇವಿಸಿ.ಕೆಫೈನ್ ಅಂಶವಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಡಿ.ಮಳೆಯಲ್ಲಿ ನೆನೆಯುವುದು ಇಷ್ಟವೇ ಇರಬಹುದು. ಆದರೂ, ಆದಷ್ಟು ಈ ಅಭ್ಯಾಸವನ್ನು ನಿಯಂತ್ರಿಸಿಕೊಂಡು ಓಡಾಡಿ.