LATEST NEWS
ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರ ರಕ್ಷಣೆ
ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರ ರಕ್ಷಣೆ
ಉಡುಪಿ ನವೆಂಬರ್ 17: ಸಮುದ್ರದ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರು ಯುವಕರನ್ನು ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಿಸಿದ ಘಟನೆ ಕಾಪು ಬೀಚ್ ನಲ್ಲಿ ನಡೆದಿದೆ.
ಸಾಗರದ ನಿವಾಸಿಗಳಾದ ತುಕಾರಾಮ್ (29) ಸಂತೋಷ್ (29) ಇಬ್ಬರು ಯುವಕರು ಮೋಜಿಗಾಗಿ ಕಾಪು ಬೀಚಿಗೆ ಬಂದಿದ್ದರು. ಸಮುದ್ರದ ನೀರಿಗೆ ಆಟವಾಡಲು ಹೋದ ಯುವಕರು ಸಮುದ್ರದ ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗುವ ಹಂತಕ್ಕೆ ತಲುಪಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳು ನೀರಿನ ಸೆಳೆತಕ್ಕೆ ಸಿಕ್ಕಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.