LATEST NEWS
ನವೆಂಬರ್ 8 ರಂದು ದೇಶದಾದ್ಯಂತ ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ – ಕೆ.ಸಿ ವೇಣುಗೋಪಾಲ್
ನವೆಂಬರ್ 8 ರಂದು ದೇಶದಾದ್ಯಂತ ಕಾಂಗ್ರೇಸ್ ನಿಂದ ಕರಾಳ ದಿನ ಆಚರಣೆ – ಕೆ.ಸಿ ವೇಣುಗೋಪಾಲ್
ಮಂಗಳೂರು ನವೆಂಬರ್ 6: ನೋಟ್ ಬ್ಯಾನ್ ನಿಂದ ದೇಶ ಆರ್ಥಿಕ ಸಂಕಷ್ಟ ಅನಭಸಿದೆ. ನವೆಂಬರ್ 8 ದೇಶದ ಪಾಲಿಗೆ ಕರಾಳ ದಿನ ಎಂದು ಕೆಪಿಸಿಸಿ ರಾಜ್ಯ ಉಸ್ತುವಾಪಿ ಕೆ.ಸಿ ವೇಣುಗೋಪಾಲ್ ಹೇಳಿದರು. ಇಂದು ಕೆಪಿಸಿಸಿ ರಾಜ್ಯ ಉಸ್ತುವಾಪಿ ಕೆ.ಸಿ ವೇಣುಗೋಪಾಲ್ ಇಂದು ಮಂಗಳೂರಿನಲ್ಲಿ ನಡೆಯುತ್ತಿರುವ ಮನೆ ಮನೆಗೆ ಕಾಂಗ್ರೇಸ್ ಅಭಿಯಾನದ ಪಾಲ್ಗೊಂಡರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬಿಜೆಪಿಯ. ಪರಿವರ್ತನಾ ಯಾತ್ರೆಯನ್ನು ಟೀಕಿಸಿದ ಅವರು ಪರಿವರ್ತನಾ ಯಾತ್ರೆಯಿಂದ ಯಾರನ್ನು ಪರಿವರ್ತನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಮೊದಲು ಬಿಜೆಪಿಯವರು ಪರಿವರ್ತನ ಆಗಬೇಕಿದೆ ಎಂದು ಅವರು ಹೇಳಿದರು. ನೋಟ್ ಬ್ಯಾನ್ ನಿಂದಾಗಿ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ ಎಂದ ಅವರು ಬಿಜೆಪಿ ದೇಶವನ್ನು ಅಭದ್ರತೆ ಕಡೆಗೆ ಕೊಂಡೊಯ್ಯುತ್ತಿದೆ ಎಂದು ಹೇಳಿದರು. ನವೆಂಬರ್ 8 ರಂದು ಬಿಜೆಪಿ ಸಂಭ್ರಮಿಸುತ್ತಿದೆ ಆದರೆ ಕಾಂಗ್ರೇಸ್ ಌಡೀ ದೇಶದಾದ್ಯಂತ ಅಂದು ಕರಾಳ ದಿನ ಆಚರಿಸಲಿದೆ ಎಂದು ಅವರು ಹೇಳಿದರು.