LATEST NEWS
ದ.ಕ. ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ :ನಾಮಪತ್ರ ಸಲ್ಲಿಸಿದ JDU ಅಭ್ಯರ್ಥಿ
ದ.ಕ. ಜಿಲ್ಲೆಯಲ್ಲಿ ಮೊದಲ ನಾಮಪತ್ರ ಸಲ್ಲಿಕೆ :ನಾಮಪತ್ರ ಸಲ್ಲಿಸಿದ JDU ಅಭ್ಯರ್ಥಿ
ಮಂಗಳೂರು ಏಪ್ರಿಲ್ 17 : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಮೊದಲ ನಾಮಪತ್ರ ಸಲ್ಲಿಕೆಯಾಗಿದೆ. ಜೆಡಿಯು ಪಕ್ಷದ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಬಾಲಕೃಷ್ಣ ಪೂಜಾರಿ ಬಂಟ್ವಾಳದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಬಂಟ್ವಾಳ ಚುನಾವಣಾ ಕಚೇರಿಗೆ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ ಬಾಲಕೃಷ್ಣ ಪೂಜಾರಿಯವರು ತಮ್ಮ ನಾಮ ಪತ್ರ ವನ್ನು ಸಲ್ಲಿಸಿದರು.
ಮೂಲತ ಬೊಳಿಯಾರು ನಿವಾಸಿ ಯಾಗಿರುವ ಬಾಲಕೃಷ್ಣ ಪೂಜಾರಿ ಬಂಟ್ವಾಳದ ನರಿಕೊಂಬು ಎಂಬಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡಿದ್ದು 10 ನೇ ತರಗತಿ ವರೆಗೆ ಶಿಕ್ಷಣ ಪಡೆದಿದ್ದಾರೆ.
ಕಳೆದ 10 ವರ್ಷಗಳಿಂದ ಜೆಡಿಯು ಪಕ್ಷದಲ್ಲಿ ಸಕ್ರೀಯರಾಗಿ ದುಡಿದಿದ್ದಾರೆ. ಆನೇಕ ಸಾಮಾಜಿಕ ಹೋರಾಟಗಳಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದಾರೆ.
ನಾಮ ಪತ್ರ ಸಲ್ಲಿಕೆಯಾದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಬಾಲಕ್ರಷ್ಣ ಬಂಟ್ವಾಳ ಕ್ಷೇತ್ರದಲ್ಲಿ ವಿವಿಧ ಮೂಲಭೂತ ಸೌಲಭ್ಯ ಗಳಿಂದ ಜನತೆ ವಂಚಿತರಾಗಿದ್ದಾರೆ.
ಅಭಿವೃದ್ದಿ ಕಾರ್ಯಗಳು ಕುಂಟಿತಗೊಂಡಿವೆ. ಕೃಷಿ ಮತ್ತು ಹಿಂದುಳಿದ ವರ್ಗ, ಅವಿದ್ಯಾವಂತರ ಒಳಿತಿಗೆ ಶ್ರಮಿಸುವುದಾಗಿ ಅವರು ತಿಳಿಸಿದರು.