LATEST NEWS
ತಾಕತ್ತಿದ್ದರೆ ಪ್ರಕಾಶ್ ರೈ ಅವರನ್ನು ತಡೆಯಿರಿ – ಯು.ಟಿ ಖಾದರ್ ಸವಾಲು

ತಾಕತ್ತಿದ್ದರೆ ಪ್ರಕಾಶ್ ರೈ ಅವರನ್ನು ತಡೆಯಿರಿ – ಯು.ಟಿ ಖಾದರ್ ಸವಾಲು
ಮಂಗಳೂರು ಡಿಸೆಂಬರ್ 21: ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಕರಾವಳಿ ಉತ್ಸವಕ್ಕೆ ಚಿತ್ರನಟ ಪ್ರಕಾಶ್ ರೈ ಚಾಲನೆ ನೀಡುವುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧ ವ್ಯಕ್ತ ವಾಗುತ್ತಿರುವುದಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಂಗಳೂರಿನಲ್ಲಿ ಮಾದ್ಯಮಗೋಷ್ಠಿಯಲ್ಲಿ ಮಾತನಾಡಿದ ಖಾದರ್, ಪ್ರಕಾಶ್ ರೈ ಈ ನಾಡಿನ ಮಣ್ಣಿನ ಮಗ, ಪ್ರಕಾಶ್ ರೈ ಬರಬಾರದು ಎನ್ನಲು ಇವರು ಯಾರು ಎಂದು ಪ್ರಶ್ನಿಸಿದರು. ತಾಕತ್ತಿದ್ದರೆ ಪ್ರಕಾಶ್ ರೈ ಅವರನ್ನು ತಡೆಯಿರಿ ಎಂದು ಸವಾಲು ಹಾಕಿದರು. ಇವರಿಗೆ ಬೇಕಾದಂತೆ ಮಾತನಾಡಬೇಕಾದವರು ಮಾತ್ರ ಇಲ್ಲಿಗೆ ಬರಬೇಕಾ? ಎಂದು ಅವರು ಪ್ರಶ್ನಿಸಿದರು.

ಲವ್ ಜಿಹಾದ್ ವಿರುದ್ದ ಹಿಂದೂ ಸಂಘಟನೆಗಳಿಂದ ಟಾಸ್ಕ್ ಫೋರ್ಸ್ ರಚನೆ ಕುರಿತು ಮಾತನಾಡಿದ ಅವರು ಹಿಂದೂ ಟಾಸ್ಕ್ ಫೋರ್ಸ್ ರಚನೆ ವಿಷಯ ಪೊಲೀಸ್ ಇಲಾಖೆ ಗಮನಕ್ಕೆ ಬಂದಿದೆ. ಚುನಾವಣೆ ಹತ್ತಿರ ಬಂದಾಗ ಒಂದೊಂದು ಫೋರ್ಸ್ ಗಳು ಹುಟ್ಟಿಕೊಳ್ಳುತ್ತದೆ. ಇದೆಲ್ಲಾ ಚುನಾವಣೆಯ ಗಿಮಿಕ್ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.