ತಲೆನೋವು ಶೀಘ್ರ ಶಮನಕ್ಕೆ ಮನೆಮದ್ದು
ಇತ್ತೀಚಿನ ಒತ್ತಡದ ಬದುಕು -ಜಂಜಟಗಳಲ್ಲಿ ತಲೆನೋವು ಸಾಮಾನ್ಯವಾಗಿ ಕಾಡೋ ಸಮಸ್ಯೆ ,ಅದರಲ್ಲೂ ಚಳಿಗಾಲದಲ್ಲಿ ಇದರ ಉಪಟಳ ಹೇಳತೀರದು. ಬನ್ನಿ ಕೆಲವು ಮನೆಮದ್ದುಗಳನ್ನು ಬಳಸಿ ಹೇಗೆ ಸರಿ ಮಾಡ್ಕೋಬಹುದು ಅಂತ ನೋಡೋಣ .
ಶುಂಠಿ :ಶುಂಠಿ ರಸ ಹಾಗೂ ನಿಂಬೆರಸವನ್ನು ಸಮಾನ ಪ್ರಮಾಣದಲ್ಲಿ ಬೆರೆಸಿ ದಿನಕ್ಕೆ ಎರಡು ಬಾರಿ ಸೇವಿಸುವುದು ,ಹಸಿ ಶುಂಠಿ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಣೆಯ ಮೇಲೆ ಹಚ್ಚಿಕೊಳ್ಳಿ
ಪುದೀನಾ :ಪುದೀನಾ ರಸ ದಿರುವ ‘ಮೆಂಥೋನ್’ ಅಂಶ ಎಂತಹ ತಲೆ ನೋವನ್ನ ದೂರ ಹಾಕುತ್ತದೆ , ಪುದೀನಾ ಎಲೆಗಳನ್ನು ಜಜ್ಜಿ ಅದರ ರಸವನ್ನು ಹಣೆಯ ಭಾಗಕ್ಕೆ ಹಚ್ಚಿಕೊಳ್ಳಿ.
ಪಾಲಾಕ್ ಎಲೆಗಳು:ಐದಾರು ಪಾಲಾಕ್ ಎಲೆಗಳನ್ನು ಬಿಸಿ ನೀರಿನಲ್ಲಿ ಬೇಯಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಕುಡಿಯುವುದು.
ಮಂಜುಗಡ್ಡೆ :ಮಂಜುಗಡ್ಡೆಯ ಪಾಕನ್ನು ಹಣೆಮೇಲೆ ಇರಿಸಿಕೊಂಡರೆ ಇಂತಹ ತಲೆ ನೋವಾದರೂ ದೂರ ಓಡಿ ಹೋಗುತ್ತದೆ
ಬೇಕಾದರೆ ಫ್ರಿಜ್ನಲ್ಲಿಟ್ಟು ತರಕಾರಿಗಳನ್ನು ಸಹ ಹಣೆ ಮೇಲೆ ಇಟ್ಟುಕೊಳ್ಳಬಹುದು.
ಲವಂಗ :ಮೂರು ಅಥವಾ ನಾಲ್ಕು ಲವಂಗ ಗಳನ್ನು ಜಜ್ಜಿ ಒಂದು ಬಟ್ಟೆಯಲ್ಲಿ ಸುತ್ತಿ ಮೂಗಿನ ಹತ್ತಿರ ಹಿಡಿದು ವಾಸನೆಯನ್ನು ಸೇವಿಸುವುದು ಅಥವಾ ಲವಂಗದ ಎಣ್ಣೆಯನ್ನು ಹಣೆಗೆ ಹಚ್ಚಿಕೊಳ್ಳುವುದು.
ಸೇಬು :ಸೇಬು ಅಥವಾ ಆಪಲ್ ಸಿಡಾರ್ ವಿನೆಗರ್ ದೇಹದಲ್ಲಿ ಆಸಿಡ್ ಮತ್ತು ಅಲ್ಕಾ ನೆಲವನ್ನು ಅಂಶವನ್ನು ಸಮ ಪ್ರಮಾಣದಲ್ಲಿ ಇರಿಸಲು ಸಹಾಯ ಮಾಡುತ್ತದೆ ಇದರಿಂದ ತಲೆನೋವು ಬೇಗ ಬಿಟ್ಟು ಹೋಗುತ್ತದೆ.