Connect with us

    MANGALORE

    ತಲವಾರು ಝಳಪಿಸಿ ಗೋಗಳ್ಳತನ

    ತಲವಾರು ಝಳಪಿಸಿ ಗೋಗಳ್ಳತನ

    ಮಂಗಳೂರು ಅಕ್ಟೋಬರ್ 25: ತಡರಾತ್ರಿ ತಲವಾರು ಝಳಪಿಸಿ ಗೋವುಗಳನ್ನು ಕದ್ದೊಯ್ದ ಘಟನೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಎಂಬಲ್ಲಿ ನಡೆದಿದೆ. ಇಲ್ಲಿಯ ಮೊಗೇರು ಎಂಬಲ್ಲಿನ ದೇವಾಲಯದ ಬಳಿ ಕಳೆದ ರಾತ್ರಿ ನಾಲ್ಕೈದು ಗೋವುಗಳು ಬೀಡು ಬಿಟ್ಟಿದ್ದು ಅವುಗಳನ್ನು ಕಂಡ ದುಷ್ಕರ್ಮಿಗಳು ಸಾಗಿಸಲು ಯತ್ನಿಸಿದ್ದಾರೆ.

    ಈ ಹಿನ್ನಲೆಯಲ್ಲಿ ಗೋವುಗಳನ್ನ ದೇವಾಲಯದ ಪರಿಸರಕ್ಕೆ ಅಟ್ಟಿಸಿಕೊಂಡು ಹೋಗಿ ಅಲ್ಲಿ ವಾಹನವೊಂದಕ್ಕೆ ಗೋವುಗಳನ್ನು ಅಮಾನವೀಯವಾಗಿ ತುಂಬಿಸಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಮನೆಯ ಮಹಿಳೆ ಎಚ್ಚರಗೊಂಡು ಹೊರಗೆ ಬಂದಾಗ ಮುಸುಕುಧಾರಿ ದುಷ್ಕರ್ಮಿಗಳು ತಲವಾರು ತೋರಿಸಿ ಸ್ಥಳದಿಂದ ತೆರಳುವಂತೆ ಬೆದರಿಕೆ ಹಾಕಿದ್ದಾರೆ.

    ಈ ಕುರಿತು ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು, ಗೋಗಳ್ಳರನ್ನ ಬಂಧಿಸುವಂತೆ ಒತ್ತಾಯಿಸಿ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

    ಸ್ಥಳಕ್ಕೆ ಧಾವಿಸಿದ ಗ್ರಾಮಾಂತ ಠಾಣೆಯ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ಸಂಚಾರ ಸುಗಮಗೊಳಿಸಿದ್ದಾರೆ. ಕಳೆದ ಹಲವಾರು ತಿಂಗಳಿನಿಂದ ಮಂಗಳೂರು ಹೊರವಲಯದಲ್ಲಿ ಗೋಗಳ್ಳತನ ಅವ್ಯಾಹತವಾಗಿ ನಡೆಯುತ್ತಿದ್ದರೂ ಅದನ್ನು ತಡೆಗಟ್ಟುವಲ್ಲಿ ಪೊಲೀಸ್ ಇಲಾಖೆ ವಿಫಲಗೊಂಡಿದೆ ಎಂದು ಬಜರಂಗದಳದ ಕಾರ್ಯಕರ್ತರು ಆರೋಪಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *