LATEST NEWS
ಜನಾರ್ಧನ ಪೂಜಾರಿಗೆ ಸೀಟು ಕೊಡಿಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ – ರಮಾನಾಥ ರೈ
ಜನಾರ್ಧನ ಪೂಜಾರಿಗೆ ಸೀಟು ಕೊಡಿಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ – ರಮಾನಾಥ ರೈ
ಮಂಗಳೂರು ನವೆಂಬರ್ 13: ಜನಾರ್ಧನ ಪೂಜಾರಿಗೆ ಚುನಾವಣಾ ಟಿಕೇಟ್ ಕೊಡಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ ಎಂದು ರಮಾನಾಥ ರೈ ತಿಳಿಸಿದ್ದಾರೆ.
ಇಂದು ಮಂಗಳೂರಿನಲ್ಲಿ ಮಾಧ್ಯಮ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ಮೇಲೆ ಬಂದಿರುವ ಅಕ್ರಮ ಆಸ್ತಿ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು. ಅಕ್ರಮ ಆಸ್ತಿ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಸಚಿವ ರಮಾನಾಥ ರೈ ತನ್ನಲ್ಲಿರುವ ಎಲ್ಲಾ ಆಸ್ತಿಯ ದಾಖಲೆಗಳನ್ನು ಬಿಡುಗಡೆ ಮಾಡಿದರು.
ನನಗೆ ಕಳ್ಳಿಗೆಯಲ್ಲಿ ಒಟ್ಟು ಆಸ್ತಿ 15.22ಎಕರೆ ಜಮೀನು ಇದೆ ಎಂದರು. ಹಾಗೂ ನನ್ನ ಪತ್ನಿಯ ಹೆಸರು ಶೈಲ ಯಾನೆ ಧನಭಾಗ್ಯ ರೈ ಎನ್ನುವುದಕ್ಕೆ ದಾಖಲೆಯಿದೆ ಎಂದರು. ಮಾಣಿಯಲ್ಲಿ ಪತ್ನಿಯ ಕುಟುಂಬದ ಜಂಟಿ ಖಾತೆಯಲ್ಲಿ
7.90 ಎಕರೆ ಆಸ್ತಿಯಿದೆ ಹಾಗೂ ಅದಕ್ಕೆ ಹೊಂದಿಕೊಂಡಿರುವ 3.04 ಎಕರೆ ಕುಮ್ಕಿ ಜಾಗ ಪತ್ನಿಗೆ ಮಂಜೂರಾಗಿದೆ ಎಂದರು.
ಹಿರಿಯ ಕಾಂಗ್ರೇಸ್ ನಾಯಕ ಜನಾರ್ದನ ಪೂಜಾರಿಯವರಿಗೆ ಓಟು ಕೊಟ್ಟವ ನಾನು, ಅವರ ಚುನಾವಣೆಗೆ ಖರ್ಚು ಕೂಡಾ ಮಾಡಿದ್ದೇನೆ ಅಲ್ಲದೆ ಅವರಿಗೆ ಸೀಟು ಕೊಡಿಸಲು 15 ದಿನ ದೆಹಲಿಯಲ್ಲಿ ಕುಳಿತಿದ್ದೆ ಎಂದು ಹೇಳಿದರು.
ಹರಿಕೃಷ್ಣ ಬಂಟ್ವಾಳ ಕಾಂಗ್ರೇಸ್ ತ್ಯಜಿಸಿ ಬಿಜೆಪಿ ಸೇರಿದ್ದಕ್ಕೆ ಪ್ರತಿಕ್ರಿಸಿಯದ ಸಚಿವರು ಕೆಲವರಿಗೆ ಬೇರೆ ಪಾರ್ಟಿಗೆ ಹೋಗಲು ಒಂದು ಕಾರಣ ಬೇಕು, ಅದಕ್ಕೆ ಆರೋಪ ಮಾಡಲು ನಾನು ಸಿಕ್ಕಿದ್ದೇನೆ, ಹೀಗೆ ಆರೋಪ ಮಾಡಿದವರು 6 ಸಲ ಸೋಲಿಸಿದವರ ಜತೆ ಸೇರಿದ್ದಾರೆ ಎಂದು ಹೇಳಿದರು.