DAKSHINA KANNADA
ಕೊಡವ ತುಳು ಜಂಟಿ ಹೋರಾಟ ಸಮಿತಿ ಅಸ್ತಿತ್ವಕ್ಕೆ
ಮಂಗಳೂರು,ಆಗಸ್ಟ್ 30: ಕೊಡವ ತುಳು ಜಂಟಿ ಹೋರಾಟ ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಪರಿಸರ ನಾಶ ಒಳಗೊಂಡಂತೆ ತುಳು ಹಾಗು ಕೊಡವ ಭಾಷೆ ಗಳನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ತುಳು ಹಾಗು ಕೊಡವ ಸಮಾನ ಮನಸ್ಕ ಸಂಘಟನೆ ಗಳು ಒಗ್ಗೂಡಿ ಹೋರಾಟ ನಡೆಸಲು ಮುಂದಾಗಿವೆ.ಕೊಡವ ತುಳು ವರ ಮೂಲಭೂತ ಸಮಸ್ಯೆ ಗಳ ಬಗ್ಗೆ ಧ್ವನಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇತ್ತಿಚೆಗೆ ಸಮಾನ ಮನಸ್ಕ ಸಂಘಟನೆ ಗಳು ಒಂದೆಡೆ ಸೇರಿ ಸಭೆ ನಡೆಸಿದವು. ಈ ಸಂದರ್ಭದಲ್ಲಿ ಕೊಡವ ಸಮಾಜದ ಹೋರಾಟಗಳಿಗೆ ತುಳುವರ ಬೆಂಬಲ ಹಾಗು ತುಳುವರ ಹೋರಾಟಗಳಿಗೆ ಕೊಡವರು ಬೆಂಬಲ ನೀಡುವ ನಿಟ್ಟಿನಲ್ಲಿ ನಿರ್ಧರಿಸಲಾಯಿತು.
ಕೊಡಗು ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ತುಳುವರು ನೆಲೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ಸಾವಿರದ ವರೆಗೆ ಕೊಡವ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಅವೆರಲ್ಲರೂ ತುಳು ನಾಡ್ ಹಾಗು ಕೊಡವ ನಾಡ್ ಹೋರಾಟಕ್ಕೆ ಬೆಂಬಲ ನೀಡುತ್ತಿವೆ.ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡು ಜಿಲ್ಲೆಗಳ ಈ ಎರಡು ಸಂಘಟನೆ ಗಳು ಒಗ್ಗೂಡಿವೆ. ಕೊಡಗಿನಲ್ಲಿ ಸತತ ಪರಿಸರ ನಾಶ ಹಾಗು ತುಳುವರ ಎತ್ತಿನ ಹೊಳೆ ಯೋಜನೆ ವಿರುದ್ದದ ಹೋರಾಟ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಹೋರಾಟಗಳಿಗೆ ಎರಡು ನೆರೆಯ ಜಿಲ್ಲೆಗಳ ಒಗ್ಗೂಡಿ ಕೊಡವ ತುಳು ವರು ಹೋರಾಟ ಮಾಡುವ ಬಗ್ಗೆ ಮಾತು ಕತೆ ನಡೆಸಲಾಗಿದೆ.