DAKSHINA KANNADA
ಕಾವ್ಯ ನಿಗೂಢ ಸಾವಿನ ತನಿಖೆ ಸಿಬಿಐಗೆ ವಹಿಸಲು ಎಬಿವಿಪಿ ಒತ್ತಾಯ
ಮಂಗಳೂರು, ಅಗಸ್ಟ್ 04 : ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ರಾಷ್ಚ್ರ ಮಟ್ಟದ ಕ್ರೀಡಾ ಪಟು ಕಾವ್ಯಳ ಸಾವಿನ ಬಗ್ಗೆ ಅವರ ಮನೆಯವರಲ್ಲಿ ಮೂಡಿರುವ ಸಂಶಯವನ್ನು ನಿವಾರಿಸುವ ನಿಟ್ಟಿನಲ್ಲಿ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಎಬಿವಿಪಿ ಆಗ್ರಹಿಸಿದೆ. ಮೂಲ್ಕಿಯ ವಿಜಯ ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ನೇತ್ರತ್ವದಲ್ಲಿ ಮೂಡಬಿದ್ರಿಯ ಆಳ್ವಾಸ್ ಕಾಲೇಜಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಾವ್ಯಳ ಸಾವಿಗೆ ನ್ಯಾಯ ಒದಗಿಸುವ ಬಗ್ಗೆ ಮೂಲ್ಕಿಯ ಹೊಟೇಲ್ ಆಧಿಧನ್ ಮುಂಭಾಗ ಜರುಗಿದ ಪ್ರತಿಭಟನಾ ಸಭೆ ನಡೆಯಿತು.ಈ ಸಂದರ್ಭದಲ್ಲಿ ಪ್ರತಿಭಟನಾ ವಿಧ್ಯಾರ್ಥಿಗಳು ಕಾವ್ಯ ಸಾವಿನ ಬಗ್ಗೆ ಇರುವ ಸಂಶಯವನ್ನು ಕಾಲೇಜಿನ ಆಡಳಿತ ಮಂಡಳಿ ನಿವಾರಿಸಬೇಕು ಎಂದು ಹೇಳಿದರು.
ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೊಳಗಾಗದೇ ನ್ಯಾಯಯುತವಾದ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಆಗ್ರಹಿಸಿದರು. ಪ್ರತಿಭಟನಾ ಸಭೆಯ ಮೊದಲು ಮೂಲ್ಕಿಯ ವಿಜಯ ಕಾಲೇಜಿನಿಂದ ಮೂಲ್ಕಿಯ ಬಸ್ಸು ನಿಲ್ದಾಣದ ಬಳಿಯಿರುವ ಮೂಲ್ಕಿಯ ಹೊಟೇಲ್ ಆಧಿಧನ್ ವರೆಗೆ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣೆಗೆಯಲ್ಲಿ ಬಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಬಿಇಪಿ ಮಂಗಳೂರು ವಿಭಾಗ ಕಾರ್ಯವಾಹ ಶೀತಲ್ ಕುಮಾರ್ ಜ್ಯೆನ್, ಶಶಿಕುಮಾರ್, ಮೂಲ್ಕಿಯ ವಿಜಯ ಕಾಲೇಜಿನ ವಿದ್ಯಾರ್ಥಿ ನಾಯಕ ಅನುಪ್ ಭಟ್, ಕಾರ್ಯದರ್ಶಿ ವಂದನಾ, ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುನೀಲ್ ಆಳ್ವ ,ವಿನೋದ್ ಸಾಲ್ಯಾನ್ ದಿನೇಶ್ ಪುತ್ರನ್ ಮತ್ತಿತರರು ಇದ್ದರು.