LATEST NEWS
ಕಾವ್ಯ ಆತ್ಮಹತ್ಯೆ ಪ್ರಕರಣ : ಆಳ್ವಾಸ್ ಸಂಸ್ಥೆಯಿಂದ ಮತ್ತೊಂದು ವಿಡಿಯೋ ಬಿಡುಗಡೆ..!!
ಮಂಗಳೂರು,ಆಗಸ್ಟ್ 08 : ಜುಲೈ 20 ರಂದು ಮೂಡಬಿದರೆ ಆಳ್ವಾಸ್ ಶಿಕ್ಷಣಾ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಸಂಶಯಾಸ್ಪದ ಸಾವಿನ ಸುತ್ತ ಇದ್ದ ಅನುಮಾನದ ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ, ಎಚ್ಚೆತ್ತ ಕಾಲೇಜಿನ ಅಡಳಿತ ಮಂಡಳಿ ಇದೀಗ 2 ನೇ ಸುತ್ತಿನ ಕೆಲವೊಂದು ಸಿಸಿಟಿವಿ ಫೂಟೇಜ್ ಗಳನ್ನು ಬಿಡುಗಡೆ ಮಾಡಿದೆ. ಇಂದು( ಬುಧವಾರ) ಕಾವ್ಯಾ ಪರ ನ್ಯಾಯಕ್ಕೆ ಆಗ್ರಹಿಸಿ 30ಕ್ಕೂ ಹೆಚ್ಚು ಸಮಾನ ಮನಸ್ಕ ಸಂಘಟನೆಗಳು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿರುವಾಗಲೇ ಈ ವಿಡಿಯೋ ದೃಶ್ಯವಳಿಗಳು ಬಿಡುಗಡೆಗೊಂಡಿರುವುದು ಕೂತುಹಲಕ್ಕೆ ಕಾರಣವಾಗಿದೆ. ಕಾವ್ಯ ಅಸಹಜ ಸಾವಿನ ಕುರಿತಂತೆ ಸಾಕಷ್ಟು ಅನುಮಾನಗಳನ್ನು ಕಾವ್ಯ ಪೋಷಕರು ವ್ಯಕ್ತಪಡಿಸಿದ್ದರು ಮತ್ತು ಇದೊಂದು ವ್ಯವಸ್ಥಿತ ಕೊಲೆ ಆರೋಪಿಸಿದ್ದರು. ಇದು ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಕಾವ್ಯಳ ಸಂಶಯಾಸ್ಪದ ಸಾವಿನ ಬಳಿಕ ಆಳ್ವಾಸ್ ವಿದ್ಯಾಸಂಸ್ಥೆ ಮತ್ತು ಆಸ್ಪತ್ರೆಯಲ್ಲಿ ನಡೆದ ಒಟ್ಟಾರೆ ವಿದ್ಯಮಾನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ಇಂದು ಬಿಡುಗಡೆ ಮಾಡಲಾಗಿದೆ. ಕಾವ್ಯಅಸಹಜ ಸಾವು ಪ್ರಕರಣವನ್ನು ಪೋಲಿಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಮಾಡುತ್ತಿದೆ.ಈ ತನಿಖೆಯ ಬಳಿಕವೇ ನಿಜಾಂಶ ಬಯಲಿಗೆ ಬರಲಿದೆ.
Video No. 1 : 07.27 pm ಕಾವ್ಯಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವುದು ಕಾಣಬಹುದು.
Video No. 2 : 07.44 pm ಕಾವ್ಯಳ ದೇಹವನ್ನು ಆಸ್ಪತ್ರೆ ಒಳಗೆ ಸಾಗಿಸುತ್ತಿರುವುದು.
Video No. 3 : 07 .45 pm ಆಸ್ಪತ್ರೆ ಒಳಗೆ ಕಾವ್ಯಳಿಗೆ ತುರ್ತು ಚಿಕಿತ್ಸೆ ನೀಡುವುದು.
Video No. 4 : 08.46 pm ಕಾವ್ಯ ಹೆತ್ತವರು ಆಸ್ಪತ್ರೆಯ ಹೊರಭಾಗದಲ್ಲಿ ರೋಧಿಸುವುದು.
Video No.5 : 08.06 pm ಕಾವ್ಯಾ ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸುವುದು.
ವಿಡಿಯೋಗಾಗಿ ಈ ಕೆಳಗಿನ ಲಿಂಕನ್ನು ಒತ್ತಿರಿ..