DAKSHINA KANNADA
ಕಾಂಗ್ರೇಸ್ ಗೂ ಅನಿವಾರ್ಯವಾಯಿತೇ ಕೇಸರಿ…
ಕಾಂಗ್ರೇಸ್ ಗೂ ಅನಿವಾರ್ಯವಾಯಿತೇ ಕೇಸರಿ…
ಸುಳ್ಯ, ಎಪ್ರಿಲ್ 21: ಕೇಸರಿ ಭಯೋತ್ಪಾದನೆ ಎನ್ನುವ ಮೂಲಕ ಕೇಸರಿ ಬಣ್ಣವನ್ನು ಕಂಡಲ್ಲಿ ದೂರ ಹೋಗುತ್ತಿದ್ದ ಕಾಂಗ್ರೇಸ್ ಈ ಬಾರಿ ಕೇಸರಿ ಬಣ್ಣವನ್ನೂ ನೆಚ್ಚಿಕೊಂಡಿದೆ.
ಎಪ್ರಿಲ್ 19 ರಂದು ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ. ರಘು ಅವರ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಕೇಸರಿ ಶಾಲುಗಳೇ ಪ್ರಮುಖ ಆಕರ್ಷಣೆಯಾಗಿತ್ತು.
ಕೆಲವರು ಕೇಸರಿ ಶಾಲನ್ನು ಹೆಗಲಿ, ಕುತ್ತಿಗೆಗೆ ಹಾಗೂ ಇನ್ನು ಕೆಲವರು ತಲೆಗೆ ಕಟ್ಟುವ ಮೂಲಕ ಬಿಜೆಪಿಗಿಂತ ತಾವು ಹಿಂದೆ ಬಿದ್ದಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಕಾಂಗ್ರೇಸ್ ನ ಈ ಕ್ರಮಕ್ಕೆ ಪ್ರತಿಪಕ್ಷ ಬಿಜೆಪಿ ಕಿಡಿ ಕಾರಿದ್ದು, ಗತಿಯಿಲ್ಲದ ಕಾಂಗ್ರೇಸ್ ಗೆ ಕೇಸರಿಯ ಮಹತ್ವ ಈಗಲಾದರೂ ಗೋಚರವಾಗಿದೆ ಎಂದು ವ್ಯಂಗವಾಡಲು ಆರಂಭಿಸಿದೆ.
ಕೇಸರಿ ಭಯೋತ್ಪಾದನೆಯ ಎನ್ನುವ ಮೂಲಕ ದೇಶದಲ್ಲಿ ಮುಸ್ಲಿಂ ಭಯೋತ್ಪಾದನೆಯ ಜೊತೆಗೆ ಕೇಸರಿ ಭಯೋತ್ಪಾದನೆಯೂ ಇದೆ ಎನ್ನುವ ಮೂಲಕ ಕಾಂಗ್ರೇಸ್ ಪಕ್ಷ ಹೊಸ ವಿವಾದವನ್ನು ಈ ಹಿಂದೆಯೇ ಮೈಗೆಳೆದುಕೊಂಡಿತ್ತು.
ಅಲ್ಲದೆ ಕೇಸರಿ ಬಣ್ಣ ಕಂಡಲ್ಲಿಂದ ಮಾರು ದೂರ ನಿಲ್ಲುತ್ತಿದ್ದ ಕಾಂಗ್ರೇಸ್ ನಾಯಕರು ಹಾಗೂ ಕಾರ್ಯಕರ್ತರು ಇದೀಗ ಕೇಸರಿ ಬಣ್ಣದೆಡೆಗೆ ವಾಲುತ್ತಿದ್ದಾರೆಯೇ ಎನ್ನುವ ಸಂಶಯವೊಂದು ಇದೀಗ ಕಾಡತೊಡಗಿದೆ.
ಈ ಸಂಶಯಕ್ಕೆ ಕಾರಣ ಎಪ್ರಿಲ್ 19 ರಂದು ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಡಾ. ರಘು ಅವರು ನಾಮಪತ್ರ ಸಲ್ಲಿಸುವ ಸಂದರ್ಭ ನಡೆದ ಮೆರವಣಿಗೆ.
ಕೇಸರಿ ಬಣ್ಣ ಸಂಘ ಪರಿವಾರದ್ದು, ಬಿಜೆಪಿಯದ್ದು ಎನ್ನುತ್ತಿದ್ದ ಕಾಂಗ್ರೇಸ್ ನ ಈ ಮೆರವಣಿಗೆಯಲ್ಲಿ ಹಲವರು ಕೇಸರಿ ಶಾಲು ಹಾಕಿ ಗಮನ ಸೆಳೆಯುತ್ತಿದ್ದರು.
ಕೇಸರಿ ಬಗ್ಗೆ ಕಡಿ ಕಾರುತ್ತಿದ್ದ ಕಾಂಗ್ರೇಸ್ ಪಕ್ಷ ಈ ಬಾರಿ ಹೇಗಾದರೂ ಮಾಡಿ ಸುಳ್ಯ ಕ್ಷೇತ್ರವನ್ನು ತನ್ನದಾಗಿಸಲು ಪ್ರಯತ್ನಿಸುತ್ತಿದ್ದು, ಅಧಿಕಾರಕ್ಕಾಗಿ ಯಾವ ಮಟ್ಟಕ್ಕೂ ಇಳಿಯಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ ಎನ್ನುತ್ತಾರೆ ಸುಳ್ಯದ ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ ವಳಲಂಬೆ.
ಸುಳ್ಯದ ಕಾಂಗ್ರೇಸ್ ಪಕ್ಷದ ಕಛೇರಿಯಿಂದ ಹೊರಟ ನಾಮಪತ್ರ ಸಲ್ಲಿಸುವ ಮೆರವಣಿಗೆಯಲ್ಲಿ ಮುಂದೆ ಹಾಗೂ ಹಿಂದೆ ಕೇಸರಿ ಶಾಲುಗಳನ್ನು ಹಾಕಿದ ವ್ಯಕ್ತಿಗಳೇ ಕಂಡು ಬರುತ್ತಿದ್ದದ್ದು ಮಾತ್ರ ವಿಶೇಷವಾಗಿತ್ತು. ಅಧಿಕಾರ ಹಾಗೂ ರಾಜಕೀಯದ ಮುಂದೆ ಯಾವುದೂ ಇಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಂತಿತ್ತು.