LATEST NEWS
ದನ ಕದಿಯಲು ಬಂದ ಕಳ್ಳ ಬಾವಿಗೆ ಬಿದ್ದ

ದನ ಕದಿಯಲು ಬಂದ ಕಳ್ಳ ಬಾವಿಗೆ ಬಿದ್ದ
ಉಡುಪಿ ಅಕ್ಟೋಬರ್ 28: ಜಾನುವಾರುಗಳನ್ನು ಕದಿಯಲು ಬಂದ ಕಳ್ಳನೊಬ್ಬ ತೆರೆದ ಬಾವಿಗೆ ಬಿದ್ದು ಸಾರ್ವಜನಿಕರಿಗೆ ಕೈಗೆ ಸಿಕ್ಕಿಬಿದ್ದ ಘಟನೆ ಉಡುಪಿಯ ಸಿದ್ದಾಪುರದಲ್ಲಿ ನಡೆದಿದೆ. ಇಲ್ಲಿಯ ಸಂತೋಷ್ ನಾಯಕ್ ಅವರ ಮನೆಯ ಬಳಿಯಿದ್ದ ದನದ ಕೊಟ್ಟಿಗೆಯಲ್ಲಿ ಎರಡು ವರ್ಷದ ಎರಡು ಕರುಗಳನ್ನು ತೋನ್ಸೆ ಬುಕ್ಕಿಗುಡ್ಡೆ ಗಣೇಶ ಪೂಜಾರಿ ಎಂಬಾತ ಕಳವು ಮಾಡಲು ಹೊಂಚು ಹಾಕಿದ್ದ. ಅದೇ ವೇಳೆ ನಾಯಿ ಬೊಗಳಿದಾಗ ಮನೆಯವರು ಎಚ್ಚರಗೊಂಡಿದ್ದಾರೆ.
ಇದರಿಂದ ಗಾಬರಿಗೊಂಡ ಗಣೇಶ್ ಓಡಿ ಹೋಗುವ ಭರದಲ್ಲಿ ಪಕ್ಕದಲ್ಲಿ ಇದ್ದ ಇಪ್ಪತ್ತು ಅಡಿ ನೀರಿಲ್ಲದ ಬಾವಿಗೆ ಬಿದ್ದಿದ್ದಾನೆ ಈ ಹಿನ್ನೆಲೆಯಲ್ಲಿ ಮೇಲೆ ಬರಲಾಗದೆ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಜಾನುವಾರು ಕಳ್ಳತನಕ್ಕೆ ಗಣೇಶ್ ಪೂಜಾರಿ ಒಟ್ಟಿಗೆ ಇನ್ನು ಕೆಲವರು ಬಂದಿದ್ದು ಗಣೇಶ ಪೂಜಾರಿ ಬಾವಿಗೆ ಬಿದ್ದುದನ್ನು ಕಂಡು ಜಾನುವಾರು ಸಾಗಣೆಗೆ ತಂದಿದ್ದ ವಾಹನದಲ್ಲಿ ಉಳಿದವರು ಪರಾರಿಯಾಗಿದ್ದಾರೆ. ನಂತರ ಸ್ಥಳಕ್ಕೆ ವಿಷಯ ತಿಳಿದು ಸ್ಥಳಕ್ಕಾಗಿ ಶಂಕರನಾರಾಯಣ ಪೊಲೀಸರು ಬಾವಿಗೆ ಬಿದ್ದಿದ್ದ ಗಣೇಶ್ ಪೂಜಾರಿಯನ್ನು ಮೇಲೆತ್ತಿ ಬಂಧಿಸಿದ್ದಾರೆ.
