Connect with us

    LATEST NEWS

    ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ದೇಶದ ಸಂಸ್ಕೃತಿಯ ಅರಿವಿಲ್ಲ : ಯು.ಟಿ. ಖಾದರ್

    ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ದೇಶದ ಸಂಸ್ಕೃತಿಯ ಅರಿವಿಲ್ಲ : ಯು.ಟಿ. ಖಾದರ್

    ಮಂಗಳೂರು, ಎಪ್ರಿಲ್ 10 : ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ದೇಶದ ಸಂಸ್ಕೃತಿಯ ಅರಿವಿಲ್ಲ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
    ಯು.ಟಿ. ಖಾದರ್‌ ಭೇಟಿ ನೀಡಿದ ದೇವಸ್ಥಾನಗಳಲ್ಲೆಲ್ಲ ಬ್ರಹ್ಮಕಲಶ ನಡೆಸಬೇಕು’ ಎಂಬುದಾಗಿ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ನೀಡಿದ ಹೇಳಿಕೆಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ ಸಚಿವರು ಈಗ ನನ್ನ ಕ್ಷೇತ್ರದ ಜನರು ತಾವಾಗಿಯೇ ತಮ್ಮ ದೇವಸ್ಥಾನಗಳಿಗೆ ಭೇಟಿ ನೀಡುವಂತೆ ನನಗೆ ಆಹ್ವಾನ ನೀಡುತ್ತಿದ್ದಾರೆ ಎಂದರು.

    ದೇಶದ ಸಂಸ್ಕೃತಿ ಸಂಸ್ಕಾರವನ್ನು ಚೆನ್ನಾಗಿ ತಿಳಿದುಕೊಂಡವರು ಎಲ್ಲ ಧರ್ಮೀಯರೂ ಸೌಹಾರ್ದದಿಂದ ಬದುಕುತ್ತಿರುವ ಜಿಲ್ಲೆಯಲ್ಲಿ ಇಂತಹ ಹೇಳಿಕೆ ಕೊಡಬಾರದಿತ್ತು,

    ಕಲ್ಲಡ್ಕ ಭಟ್ ಅವರಿಗೆ ದೇಶದ ಸಂಸ್ಕೃತಿಯ ಅರಿವಿಲ್ಲ ಆದ್ದರಿಂದ ಈ ರೀತಿಯಾಗಿ ಮಾತನಾಡುತ್ತಿದ್ದಾರೆ.

    ಅವರಿಗೆ ಇದು ಶೋಭೆ ತಾರದು, ಈ ಬಾರಿ ಚುನಾವಣೆಯಲ್ಲಿ ಜನರೇ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದರು.
    ಇಡೀ ಏಷ್ಯಾ ಖಂಡದಲ್ಲಿ ಅತಿ ಹೆಚ್ಚು ಗೋಮಾಂಸ ರಫ್ತು ಭಾರತದಿಂದ ಆಗುತ್ತಿದೆ.

    ದೇಶದಲ್ಲಿ ಅದರಲ್ಲೂ ಮುಖ್ಯ ವಾಗಿ ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ ಮತ್ತು ಉತ್ತರ ಪ್ರದೇಶ ರಾಜ್ಯಗಳಿಂದ ಅತ್ಯಧಿಕ ಗೋಮಾಂಸ ರಫ್ತಾಗುತ್ತಿದೆ.

    ಗೋಮಾಂಸ ಸೇವನೆಗೆ ಸಂಬಂಧಿಸಿ ಕೇರಳ, ಗೋವಾ ಮತ್ತಿತರ ಕೆಲವು ರಾಜ್ಯಗಳಿಗೆ ವಿನಾಯಿತಿ ನೀಡಲಾಗಿದೆ.

    ಹೀಗೆ ಕೆಲವು ರಾಜ್ಯಗಳಲ್ಲಿ ವಿನಾಯಿತಿ, ಕೆಲವು ರಾಜ್ಯಗಳಲ್ಲಿ ನಿಷೇಧ ಏಕೆ? ಎಂದು ಪ್ರಶ್ನಿಸಿದ ಅವರು ಇಡೀ ದೇಶಕ್ಕೆ ಅನ್ವಯವಾಗುವಂತೆ ಗೋವಧೆ ನಿಷೇಧದ ಬಗ್ಗೆ ಕೇಂದ್ರ ಸರ್ಕಾರ ನೀತಿಯನ್ನು ರೂಪಿಸಲಿ ಎಂದರು.

    ಚುನಾವಣೆ ಬಂದಾಗ ಬಿಜೆಪಿಗೆ ಮಾತನಾಡಲು ಬೇರೆ ವಿಷಯವಿಲ್ಲ. ಹಾಗಾಗಿ ಗೋವುಗಳ ವಿಷಯವನ್ನು ಎತ್ತಿಕೊಂಡು ರಾಜಕೀಯ ಮಾಡುತ್ತಿದೆ.

    ಎಂದು ಆರೋಪಿಸಿದ ಅವರು ಗೋಕಳ್ಳರ ರಕ್ಷಣೆಗೆ ನಾನೆಂದೂ ಮುಂದಾಗಿಲ್ಲ.

    ಕೈರಂಗಳ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸುವಂತೆ ಗೃಹ ಸಚಿವರನ್ನುಸ್ವತ ನಾನೇ ಕೋರಿದ್ದೇನೆ ಎಂದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *