LATEST NEWS
ಓಲಾ ವಿರುದ್ದ ತೀವ್ರಗೂಂಡ ಹೋರಾಟ: ಬೀದಿಗಿಳಿದ ಹೋರಾಟಗಾರನ್ನು ಠಾಣೆಗೊಯ್ದ ಪೋಲಿಸರು
ಓಲಾ ವಿರುದ್ದ ತೀವ್ರಗೂಂಡ ಹೋರಾಟ: ಬೀದಿಗಿಳಿದ ಹೋರಾಟಗಾರನ್ನು ಠಾಣೆಗೊಯ್ದ ಪೋಲಿಸರು
ಮಂಗಳೂರು, ಮಾರ್ಚ್ 10 :ಮಂಗಳೂರಿನಲ್ಲಿ ಓಲಾ ವಿರುದ್ದ ನಡೆಯುತ್ತಿರುವ ಮುಷ್ಕರ ತೀವೃಗೊಂಡಿದ್ದು, ಇಂದು ಬೀದಿಗಿಳಿದ ಹೋರಾಟಗಾರರನ್ನು ಪೋಲಿಸರು ಬಂಧಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮಂಗಳೂರಿನಲ್ಲಿ ಓಲಾ ವಿರುದ್ದ ಚಾಲಕರು ನಡೆಸುತ್ತಿ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದ್ದು,ಓಲಾ ವಿರುದ್ದ ಹೋರಾಟವನ್ನು ತೀವ್ರಗೊಳಿಸಿದ್ದರು. ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಓಲಾ ಕಂಪೆನಿ ಕಚೇರಿಗೆ ಬೀಗ ಹಾಕಿದ ಓಲಾ ಕಂಪೆನಿ ಸಿಬ್ಬಂದಿಗಳು ಓಲಾ ಕಂಪೆನಿ ಅಧಿಕಾರಿಗಳು ಸ್ಥಳಖ್ಕೆ ಬರುವಂತೆ ಆಗ್ರಹಿಸಿ ಹೋರಾಟವನ್ನು ಉಗ್ರ ಸ್ವರೂಪಕ್ಕೆ ಕೊಂಡುಹೋಗಲು ನಿರ್ಧರಿಸಿದ ಪರಿಣಾಮ ರಸ್ತೆ ತಡೆ ನಡೆಸಲು ಮುಂದಾಗಿ ಬೀದಿಗಿಳಿದ್ದರು. ಬೀದಿಗಿಳಿದ ಹೋರಾಟಗಾರರನ್ನು ಪೋಲಿಸರು ಬಂಧಿಸಿ ಠಾಣೆಗೆ ಒಯ್ದಿದ್ದು, ಸ್ಥಳದಲ್ಲಿ ಬಿಗಿ ಪೋಲಿಸ್ ಬಂದೋಬಸ್ತ್ ಮುಂದುವರೆದಿದೆ.