LATEST NEWS
ಅಂಡರ್ ಆರ್ಮ್ ಕ್ರಿಕೆಟ್ ನಲ್ಲೂ ಅಂಡರ್ ವರ್ಲ್ಡ್
ಅಂಡರ್ ಆರ್ಮ್ ಕ್ರಿಕೆಟ್ ನಲ್ಲೂ ಅಂಡರ್ ವರ್ಲ್ಡ್
ಮಂಗಳೂರು ನವೆಂಬರ್ 23: ಭೂಗತ ಲೋಕ ಹೊರ ಪ್ರಪಂಚಕ್ಕೆ ಗೋಚರಿಸದಿದ್ದರೂ ಸದ್ದಿಲ್ಲದೇ ಚಟುವಟಿಕೆ ನಡೆಸುತ್ತಲೇ ಇದೇ. ಈ ಭೂಗತ ಲೋಕದ ಎಷ್ಟು ಸಕ್ರಿಯಗೊಂಡಿದೆ ಎಂದರೆ ಪುಡಿ, ಲೋಕಲ್ ಕ್ರಿಕೆಟ್ ಟೀಮ್ ನ್ನು ಕಂಟ್ರೋಲ್ ಮಾಡುವಷ್ಟು ಕೆಳ ಮಟ್ಟಕ್ಕೆ ಇಳಿದಿದೆ.
ಮಂಗಳೂರಿನ ಲೋಕಲ್ ಅಂಡರ್ ಆರ್ಮ್( ಅಂಡರಮ್) ಕ್ರಿಕೆಟ್ ಟೂರ್ನ್ ಮೆಂಟ್ ಗಳ ಫಲಿತಾಂಶಗಳ ಮೇಲು ಪ್ರಭಾವ ಬೀರಲು ಆರಂಭಿಸಿವೆ. ಮಂಗಳೂರಿನಲ್ಲಿ ಈ ಹಿಂದಿನಿಂದಲೂ ಓವರ್ ಆರ್ಮ್ ಕ್ರಿಕೆಟ್ ಗಿಂತ ಅಂಡರ್ ಆರ್ಮ್ ಕ್ರಿಕೆಟ್ ಬಹಳ ಜನಪ್ರಿಯ. ಮಂಗಳೂರಿನಲ್ಲಿ ಗಲ್ಲಿ ಗಲ್ಲಿಗಳಲ್ಲಿ ಈ ಕ್ರಿಕೆಟ್ ಪಂದ್ಯಾಟಗಳು ನಡೆಯುತ್ತವೆ. ಈ ಹಿಂದೆ ಅತ್ಯಂತ ಪಾರದರ್ಶಕವಾಗಿ ನಡೆಯುತ್ತಿದ್ದ ಈ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಗಳಲ್ಲಿ ಈಗ ಬುಕ್ಕಿಗಳ ಪ್ರಭಾವ ಹೆಚ್ಚಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಬುಕ್ಕಿಗಳು ಆಟಗಾರರನ್ನು ಖರೀದಿಸುವಂತೆ ಈ ಲೋಕಲ್ ಕ್ರಿಕೆಟ್ ನಲ್ಲಿ ಬುಕ್ಕಿಗಳ ಪ್ಲೇಯರ್ ಗಳನ್ನು ಖರೀದಿಸಿಲು ಆರಂಭಿಸಿದ್ದಾರೆ. ಉರ್ವಾದ ಕೆಲ ಟೀಮ್ ಗಳು ಏಕ ಸಾಮ್ಯ ಸಾಧಿಸಲು ಒಳ್ಳೆಯ ಆಟಗಾರರನ್ನು ಲಕ್ಷಾಂತರ ರೂಪಾಯಿ ನೀಡಿ ಖರೀದಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಮಂಗಳೂರಿನಾದ್ಯಂತ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟಗಳು ನಿಂತೇ ಹೋಗಿವೆ.
ಇನ್ನು ಈ ಕ್ರಿಕೆಟ್ ಪಂದ್ಯಾಟಗಳಲ್ಲಿ ಭೂಗತ ಲೋಕ ತನ್ನನ್ನು ತೊಡಗಿಸಿಕೊಂಡಿದೆ. ಭೂಗತ ಪಾತಕಿ ಆಕಾಶಭವನ ಶರಣ್ ಗ್ಯಾಂಗ್ ಈ ಲೋಕಲ್ ಕ್ರಿಕೆಟರ್ ಗಳನ್ನು ಕಂಟ್ರೋಲ್ ಮಾಡುವಷ್ಟು ಕೆಳ ಮಟ್ಟಕ್ಕೆ ಇಳಿದಿದೆ. ಯಾವ ಟೀಮ್ ನಲ್ಲಿ ಯಾವ ಆಟಗಾರ ಆಡಬೇಕು ಎನ್ನವುದನ್ನು ಜೈಲಿನಲ್ಲಿ ಕುಳಿತಿರುವ ಈ ಭೂಗತ ಪಾತಕಿ ಆಕಾಶಭವನ ಶರಣ ನಿರ್ಧರಿಸುತ್ತಾನೆ. ಬೆದರಿಕೆ ಹಾಕಿ ಪ್ಲೆಯರ್ ಗಳು ಆಡದಂತೆ ಮಾಡುತ್ತಾನೆ. ಅಷ್ಟು ಪ್ರಭಾವ ಶರಣ್ ಈ ಲೋಕಲ್ ಕ್ರಿಕೆಟ್ ಮೇಲೆ ಹೊಂದಿದ್ದಾನೆ.
ಇದು ಕ್ರಿಕೆಟ್ ಮಾತ್ರವಲ್ಲ ಇದೊಂದು ದೊಡ್ಡ ಬುಕ್ಕಿಗಳ ವ್ಯವಹಾರವಾಗಿ ಬೆಳೆದು ಬಂದಿದೆ. ಉರ್ವಾದಲ್ಲಿ ನಡೆಯುವ ಪ್ರತಿ ಕ್ರಿಕೆಟ್ ಪಂದ್ಯಾಟಗಳ ಮೇಲೂ ಭಾರಿ ಬೆಟ್ಟಿಂಗ್ ನಡೆಯುತ್ತಿದೆ. ಮುಂಬಯಿಯಲ್ಲಿ ಕುಳಿತ ಬುಕ್ಕಿಗಳು ಈ ಕೊಟ್ಯಾಂತರ ರೂಪಾಯಿ ವ್ಯವಹಾರದ ಸೂತ್ರದಾರರು ಎಂದು ಹೇಳಲಾಗುತ್ತಿದೆ. ಈ ವ್ಯವಹಾರ ಪೊಲೀಸರಿಗೆ ತಿಳಿದಿಲ್ಲವೆಂದೆನಿಲ್ಲ. ಈ ವ್ಯವಹಾರದಲ್ಲಿ ಕೆಲ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ.
ಇದನ್ನು ಹೀಗೆ ಬೆಳೆಯಲು ಬಿಟ್ಟರೆ ಮಂಗಳೂರಿನಲ್ಲಿ ನಡೆಯುವ ಪ್ರತಿಯೊಂದು ಚಟುವಟಿಕೆಗಳ ಮೇಲೂ ಬೆಟ್ಟಿಂಗ್ ಆರಂಭವಾಗುವ ಆತಂಕವಿದೆ. ಈ ಹಿನ್ನಲೆಯಲ್ಲಿ ಈ ವ್ಯವಹಾರವನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಗೃಹ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.