LATEST NEWS
ತನ್ನ ಕಂಪೆನಿಯ ಹೆಸರನ್ನು ಬದಲಿಸಲು ಮುಂದಾದ ಪುಡ್ ಡೆಲಿವರಿ ಸಂಸ್ಥೆ ಜೊಮ್ಯಾಟೊ
![](https://i0.wp.com/themangaloremirror.in/wp-content/uploads/2024/04/For-Advertisement-Please-Contact-1.jpg?fit=728%2C90&ssl=1)
ನವದೆಹಲಿ ಫೆಬ್ರವರಿ 07: ಫುಡ್ ಡೆಲಿವರಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆ ಜೊಮ್ಯಾಟೊ ಇದೀಗ ತನ್ನ ಹೆಸರನ್ನು ಬದಲಿಸಲು ಚಿಂತನೆ ನಡೆಸಿದೆ. ಕಂಪನಿಯ ಹೆಸರನ್ನು ಎಟರ್ನಲ್ ಎಂದು ಬದಲಾಯಿಸಲು ಕಂಪನಿಯ ಬೋರ್ಡ್ ಗುರುವಾರ ಅನುಮತಿ ನೀಡಿದೆ.
ಸದ್ಯ ಇದೀಗ ಈ ಬದಲಾವಣೆ ಕುರಿತಂತೆ ಕಾನೂನು ಹಾಗೂ ಕಾರ್ಪೋರೆಟ್ ಸಚಿವಾಲಯಗಳ ಒಪ್ಪಿಗೆ ಅಗತ್ಯ ಇದೆ ಎಂದು ಷೇರು ಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಕಂಪನಿ ಹೇಳಿದೆ. ಅದಾಗ್ಯೂ ಕಂಪನಿಯ ಫುಡ್ ಡೆಲಿವರಿ ಉದ್ಯಮ ಜೊಮ್ಯಾಟೊದ ಹೆಸರು, ಆ್ಯಪ್ ಹಾಗೆ ಇರಲಿದೆ. ಕೇವಲ ಕಂಪೆನಿ ಹೆಸರನ್ನು ಮಾತ್ರ ಬದಲಾಯಿಸಲಿದೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)