MANGALORE
ಯುವವಾಹಿನಿ(ರಿ.) ಕಂಕನಾಡಿ ಘಟಕ – ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿಯ ಪ್ರಯುಕ್ತ ಗುರು ಸ್ಮರಣೆ, ಪ್ರತಿಭಾ ಪುರಸ್ಕಾರ
ಮಂಗಳೂರು ಸೆಪ್ಟೆಂಬರ್ 29: ಯುವವಾಹಿನಿ(ರಿ.) ಕಂಕನಾಡಿ ಘಟಕ ಇದರ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿಯ ಪ್ರಯುಕ್ತ ಗುರು ಸ್ಮರಣೆ, ಪ್ರತಿಭಾ ಪುರಸ್ಕಾರ ಹಾಗೂ ಬಹುಮಾನ ವಿತರಣ ಕಾರ್ಯಕ್ರಮ ದಿನಾಂಕ 24.09.2023 ರಂದು ರವಿವಾರ ಶ್ರೀ ಮಹಾಂಕಾಳಿ ದೈವಸ್ಥಾನ ಉಜ್ಜೋಡಿಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ನಮ್ಮ ಘಟಕದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು .ಪ್ರಾರ್ಥನೆಯನ್ನು ಘಟಕದ ಸದಸ್ಯರಾದ ಕುಮಾರಿ ರಚನಾ ನೆರವೇರಿಸಿದರು ಬಳಿಕ ಸಭಾ ಕಾರ್ಯಕ್ರಮ ಜರಗಿತು. ಅಧ್ಯಕ್ಷರಾದ ಲೋಕೇಶ್ ಅಮೀನ್ ರವರು ಸ್ವಾಗತ ಭಾಷಣ ನೆರವೇರಿಸಿದರು ಸಭೆಯ ಉದ್ಘಾಟನೆಯನ್ನು ಶ್ರೀಮತಿ ಶೋಭಾಲತಾ ಸುವರ್ಣ ನ್ಯಾಯವಾದಿ ಮತ್ತು ನೋಟರಿ ಪಬ್ಲಿಕ್ ಬಿಸಿ ರೋಡ್, ಬಂಟ್ವಾಳ ನೆರವೇರಿಸಿದರು.
ಪ್ರಧಾನ ಭಾಷಣಕಾರರಾಗಿ ಡಾ. ಅರುಣ್ ಉಳ್ಳಾಲ್, ಪ್ರಾಧ್ಯಾಪಕರು ಸಂತ ಆಗ್ನೆಸ್ ಕಾಲೇಜ್ ಹಾಗೂ ಮುಖ್ಯ ಅತಿಥಿಗಳಾಗಿ ಡಾ. ಶೇಷಪ್ಪ ಸಹಪ್ರಾಧ್ಯಾಪಕರು, ಸಮಾಜಶಾಸ್ತ್ರ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಮುಡಿಪು ಹಾಗೂ ಶ್ರೀ ರಾಜೇಶ್ ಬಿ ಅಧ್ಯಕ್ಷರು, ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಭಾಗವಹಿಸಿದರು. ಹಾಗೂ ಶ್ರೀ ಉಮನಾಥ್ ಕೋಟ್ಯಾನ್ ಮಹಾಂಕಾಳಿ ಸೇವಾ ಸಮಿತಿ ಉಜ್ಜೋಡಿ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಳಿಕ ಡಾಕ್ಟರ್ ಸದಾನಂದ ಪೂಜಾರಿ ಹಿರಿಯ ಮೂತ್ರ ರೋಗ ತಜ್ಞರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆ ಮಂಗಳೂರು. ಕರ್ನಾಟಕ ರಾಜ್ಯ ಡಾ. ಬಿ ಸಿ ರಾಯ್ ಪ್ರಶಸ್ತಿ ಪುರಸ್ಕೃತರು. ಇವರನ್ನು ಹಾಗೂ ಡಾ. ಅರುಣ್ ಉಳ್ಳಾಲ್ ಮತ್ತು ಡಾ. ಶೇಷಪ್ಪ ಅಮೀನ್ ಇವರನ್ನು ಸನ್ಮಾನಿಸಲಾಯಿತು ಹಾಗೂ ಎಸ್. ಎಸ್ ಎಲ್. ಸಿ ಮತ್ತು ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸುಮಾರು 12 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಜರಗಿತು. ಘಟಕದ ವತಿಯಿಂದ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರವನ್ನು ಹಾಗೂ ವಿಜೇತ ಮಕ್ಕಳಿಗೆ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀ ನವೀನ್ ಕೋಟ್ಯಾನ್ ಹಾಗೂ ಕಾರ್ಯದರ್ಶಿ ಶ್ರೀಮತಿ ಮಮತಾ ತೇಜಪಾಲ್ ಉಪಸ್ಥಿತರಿದ್ದರು. ನಿರೂಪಕರಾಗಿ ಶ್ರೀ ಭವಿತ್ ರಾಜ್, ಶ್ರೀ ರೋಹಿತ್ ಕುಮಾರ್, ಕುಮಾರಿ ಮೇಘ ಮಾತು ಶ್ರೀಮತಿ ವೀಣಾ ಸಹಕರಿಸಿದರು. ನವೀನ್ ಕೋಟ್ಯಾನ್ ರವರು ಧನ್ಯವಾದ ಸಲ್ಲಿಸಿದರು