KARNATAKA
ವಿಮಾನ ನಿಲ್ದಾಣದಲ್ಲಿ ಬ್ಲಾಗ್ ಮಾಡಿದ ಕನ್ನಡದ ಯುಟ್ಯೂಬರ್ ಅರೆಸ್ಟ್
ಬೆಂಗಳೂರು ಎಪ್ರಿಲ್ 17: ವಿಮಾನ ನಿಲ್ದಾಣದಲ್ಲಿ ನಿರ್ಬಂದಿತ ಪ್ರದೇಶದಲ್ಲಿ ವಿಡಿಯೋ ಬ್ಲಾಗ್ ಮಾಡಿದ ಆರೋಪದ ಮೇಲೆ ಯೂಟ್ಯೂರ್ ವಿಕಾಸ್ ಗೌಡ ಅವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇದೀಗ ಕಟೆಂಟ್ ಗಾಗಿ ಮಾಡಲು ಹೋಗಿ ಯುಟ್ಯೂಬರ್ ಗಳು ಅರಸ್ಟ್ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ವಿಕಾಸ ಗೌಡ ರನ್ ವೇನಲ್ಲಿ ವಿಡಿಯೋ ಮಾಡಿ ತನ್ನ ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದನು. ವಿಡಿಯೋದಲ್ಲಿ “ಟಿಕೆಟ್ ಇಲ್ಲದೆ ಒಳಗಡೆ ಬಂದಿದ್ದೇನೆ, 24 ಗಂಟೆ ರನ್ ವೇ ಬಳಿಯೇ ಇದ್ದೆ. ಎಲ್ಲ ಅಧಿಕಾರಿಗಳ, ಸಿಬ್ಬಂದಿ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಮಾಡಿ, ವಿಡಿಯೋ ಮಾಡಿದ್ದೇನೆ” ಎಂದು ಹೇಳಿದ್ದನು. ಈ ವಿಡಿಯೋವನ್ನು ನೋಡಿದ ಸಿಐಎಸ್ಎಫ್ ಅಧಿಕಾರಿಗಳು ವಿಕಾಸಗೌಡ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಳಿಕ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿಕಾಸ್ಗೌಡನನ್ನು ಬಂಧಿಸಿದ್ದಾರೆ.
ವಿಕಾಸ್ ಗೌಡ ವೀವ್ಸ್ ಹೆಚ್ಚಿಸಿಕೊಳ್ಳುವ ಭರದಲ್ಲಿ ನಿಯಮ ಮೀರಿ ವಿಡಿಯೋ ಮಾಡಿದ್ದನು. ಏರ್ಪೋರ್ಟ್ ರನ್ ವೇ ಚಿತ್ರೀಕರಣ ಮಾಡಿ ತಗ್ಲಾಕೊಂಡಿದ್ದನು. ಹೀಗಾಗಿ ನಿರ್ಬಂಧಿತ ಪ್ರದೇಶಕ್ಕೆ ಹೋಗಿ ವಿಡಿಯೋ ಮಾಡಿದ್ದಕ್ಕೆ ಯೂಟ್ಯೂಬರ್ ಕೇಸ್ ಹಾಕಿಸಿಕೊಂಡಿದ್ದನು.
ಇನ್ನು ಪೊಲೀಸರ ವಿಚಾರಣೆ ವೇಳೆ ವಿಕಾಸ್ ಗೌಡ ಟಿಕೆಟ್ ಪಡೆದಿರೋದಾಗಿ ಒಪ್ಪಿಕೊಂಡಿದ್ದಾನೆ. ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದನು. ಟಿಕೆಟ್ ಪಡೆದು ಟ್ರಾವೆಲ್ ಮಾಡದೇ ರನ್ ವೇಯಲ್ಲಿ ಉಳಿದುಕೊಂಡಿದ್ದನು. ಸುಮಾರು ನಾಲ್ಕೈದು ಗಂಟೆಗಳ ಕಾಲ ಉಳಿದುಕೊಂಡಿದ್ದನು. ನಂತರ ಅಲ್ಲಿಯೇ ವಿಡಿಯೋ ಮಾಡಿಕೊಂಡು ಬಂದಿದ್ದನು.