KARNATAKA
ಧರ್ಮಸ್ಥಳ ಪ್ರಕರಣ – ಮಾಧ್ಯಮಗಳಿಗೆ ನಿರ್ಬಂಧದ ಬೆಂಗಳೂರು ಕೋರ್ಟ್ ಆದೇಶ ವಿರುದ್ದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಥರ್ಡ್ ಐ ಯೂಟ್ಯೂಬ್ ಚಾನೆಲ್

ಬೆಂಗಳೂರು ಜುಲೈ 22: ಧರ್ಮಸ್ಥಳ ಗ್ರಾಮದಲ್ಲಿ ನಡೆದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳ ಶ್ರೀ ಮಂಜುನಾಥಸ್ವಾಮಿ ದೇವಸ್ಥಾನ ಮತ್ತು ದೇವಾಲಯವನ್ನು ನಡೆಸುತ್ತಿರುವ ಕುಟುಂಬದ ವಿರುದ್ಧ ಯಾವುದೇ “ಮಾನಹಾನಿಕರ ವಿಷಯವನ್ನು” ಪ್ರಕಟಿಸುವುದನ್ನು ನಿರ್ಬಂಧಿಸಿ ಮಾಧ್ಯಮಗಳ ಸಂಸ್ಥೆ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಬೆಂಗಳೂರು ನ್ಯಾಯಾಲಯದ ಏಕಪಕ್ಷೀಯ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಥರ್ಡ್ ಐ ಯೂಟ್ಯೂಬ್ ಚಾನೆಲ್ ವಿಶೇಷ ರಜೆ ಅರ್ಜಿಯನ್ನು ಸಲ್ಲಿಸಿದೆ.
ಅನಾಮಧೇಯ ವ್ಯಕ್ತಿಯೊಬ್ಬ ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದನೆ ಎಂದು ವಕೀಲರ ಮೂಲಕ ಹೇಳಿಕೆ ನೀಡಿದ್ದ ಬಳಿಕ ಈ ಪ್ರಕರಣ ಕುರಿತಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಬಳಿಕ ಅನಾಮಧೇಯ ವ್ಯಕ್ತಿ ಬೆಳ್ತಂಗಡಿ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡಿದ್ದ, ಈ ನಡುವೆ ಮಾಧ್ಯಮಗಳ ಮೇಲೆ ಧರ್ಮಸ್ಥಳ ಸಂಸ್ಥೆ ಯಾವುದೇ ರೀತಿಯ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಹಾಗೂ ಈಗಾಗಲೇ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟಿಸಿರುವ ಎಲ್ಲಾ ಲಿಂಕ್ ಗಳನ್ನು ತೆಗೆದು ಹಾಕಲು ಅರ್ಜಿ ಸಲ್ಲಿಸಿ ಆದೇಶ ಪಡೆದುಕೊಂಡಿತ್ತು.

ಇದೀಗ ಈ ಆದೇಶದ ವಿರುದ್ದ ಥರ್ಡ್ ಐ ಯೂಟ್ಯೂಬ್ ಚಾನೆಲ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಸುಪ್ರೀಂಕೋರ್ಟ್ ಅರ್ಜಿಯಲ್ಲಿ ಬೆಂಗಳೂರು ನ್ಯಾಯಾಲಯದ ಆದೇಶವನ್ನು “ನ್ಯಾಯಾಂಗ ಪ್ರಕ್ರಿಯೆಯ ದುರುಪಯೋಗ” ಮತ್ತು ಧರ್ಮಸ್ಥಳ ಕ್ಷೇತ್ರದ ಕುರಿತಂತೆ ಯಾವುದೇ ರೀತಿಯ ಅವಹೇಳನ ಮಾಡಲಾಗಿಲ್ಲ ಎಂದು ತಿಳಿಸಿದ್ದು, ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಲಾಗಿದೆ. ನ್ಯಾಯಾಲಯದ ಆದೇಶ ವಾಕ್ ಮತ್ತು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ನೇರ ದಾಳಿಯಾಗಿದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಾದಿ, ಅವರ ಕುಟುಂಬ ಸದಸ್ಯರು ಅಥವಾ ಯಾವುದೇ ಸಂಸ್ಥೆಗಳ ವಿರುದ್ಧ ಯಾವುದೇ ಆರೋಪವಿಲ್ಲ” ಎಂದು ಬೆಂಗಳೂರು ನ್ಯಾಯಾಲಯದ ಮುಂದೆ ವಾದಿಗಳು ತಪ್ಪಾಗಿ ನಿರೂಪಿಸಿದ್ದಾರೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ದೇವಾಲಯದ ಆಡಳಿತವನ್ನು ದೋಷಾರೋಪಣೆಗೆ ಒಳಪಡಿಸಿದ ಮತ್ತು ವಾದಿಗಳ ಹೆಸರನ್ನು ಹೆಸರಿಸಿದ ಎರಡು ದೂರುಗಳನ್ನು ಎಫ್‌ಐಆರ್ ಸೇರಿಸಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅರ್ಜಿ ಕುರಿತಂತೆ ಹೆಚ್ಚಿನ ಮಾಹಿತಿ ಲೈವ್ ಲಾ ವೆಬ್ ಸೈಟ್ ಲಿಂಕ್
https://www.livelaw.in/top-stories/supreme-court-plea-against-bengaluru-court-gag-order-against-media-dharmasthala-burial-case-defamatory-content-against-temple-298328