LATEST NEWS
ಮಂಗಳೂರು ನೇತ್ರಾವತಿ ಸೇತುವೆಯಲ್ಲಿ ಯುವಕ ನಾಪತ್ತೆ, ಆತ್ಮಹತ್ಯೆ ಶಂಕೆ…

ಸೇತುವೆ ಬಳಿ ಅನಾಥ ಸ್ಥಿತಿಯಲ್ಲಿದ್ದ ಯುವಕನ ಬೈಕ್
ಮಂಗಳೂರು, ಜೂ 10:ಯುವಕನೊಬ್ಬನ ಬೈಕ್ ಒಂದು ನೇತ್ರಾವತಿ ಸೇತುವೆ ಸಮೀಪ ಪತ್ತೆಯಾಗಿದ್ದು, ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಂಗಳೂರಿನ ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿರುವ ಬಂಟ್ವಾಳ ಕುರ್ನಾಡು ಗ್ರಾಮದ ನಿವಾಸಿ ಪ್ರವೀಣ್ ಸಫಲ್ಯ ಅವರ ಬೈಕ್ ಇದಾಗಿದ್ದು, ಪ್ರವೀಣ್ ಎಸ್.ಎಲ್.ಆರ್ ಲಿಮಿಟೆಡ್ ಕಂಪನಿಯ ಸೇಲ್ಸ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಪ್ರವೀಣ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಅವರಿಗಾಗಿ ಹುಡುಕಾಟ ಮುಂದುವರಿದಿದೆ.
