LATEST NEWS
ಹೆಬ್ರಿ – ಕಾಲು ಜಾರಿ ಬಿದ್ದು ಸೀತಾನದಿ ಹೊಳೆಯಲ್ಲಿ ನೀರುಪಾಲಾದ ಯುವಕ

ಹೆಬ್ರಿ ಎಪ್ರಿಲ್ 27: ಸೀತಾನದಿ ಹೊಳೆಯಲ್ಲಿ ಯುವಕನೋರ್ವ ಕಾಲು ಜಾರಿ ಬಿದ್ದು ಸಾವನಪ್ಪಿದ ಘಟನೆ ಎಪ್ರಿಲ್ 26 ರಂದು ಸಂಭವಿಸಿದೆ.
ಮೃತರನ್ನು ಹೆಬ್ರಿ ಕಿನ್ನಿ ಗುಡ್ಡೆ ನಿವಾಸಿ ಸುಧಾಕರ್ ಶೆಟ್ಟಿ ಅವರ ಪುತ್ರ ಸಂಕೇತ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ನದಿಗೆ ಸ್ಥಾನಕ್ಕೆ ತೆರಳಿದಾಗ ಕಾಲು ಜಾರಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಹೆಬ್ರಿ ಗ್ರಾಮ ಪಂಚಾಯತ್‌ನ ಅಂಗವಿಕಲರ ಪುನರ್‌ವಸತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಹೆಬ್ರಿ ಜೆಸಿಐ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯರಾಗಿ ಗುರುತಿಸಿಕೊಂಡಿದ್ದರು. ಎಲ್ಲರೊಂದಿಗೆ ಸದಾ ನಗುಮೊಗದೊಂದಿಗೆ ಬೆರೆಯುತ್ತಿದ್ದರು.
