LATEST NEWS
ಮಾವಿನಹಣ್ಣು ಕೀಳುವ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು…!!

ಮಂಗಳೂರು ಜೂನ್ 24: ಮಾವಿನ ಮರದಿಂದ ಹಣ್ಣು ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸಾವನಪ್ಪಿರುವ ಘಟನೆ ಮಂಗಳೂರಿನ ದೇರಳಕಟ್ಟೆ ಜಲಾಲ್ ಬಾಗ್ ಬಳಿ ಸಂಭವಿಸಿದೆ. ಮೃತರನ್ನು ಹರೇಕಳ ಉಲ್ಲಾಸ್ ನಗರದ ಮಹಮ್ಮದ್ ಎಂಬವರ ಪುತ್ರ ಇಲ್ಯಾಸ್ (30) ಎಂದು ಗುರುತಿಸಲಾಗಿದೆ.
ಮೂಲತಃ ಹರೇಕಳದವರಾದ ಇವರ ಕುಟುಂಬ ಕಳೆದ ಕೆಲವು ವರ್ಷಗಳ ಹಿಂದೆ ದೇರಳಕಟ್ಟೆಯ ಜಲಾಲ್ ಬಾಗ್ ಗೆ ಬಂದು ವಾಸವಾಗಿದ್ದರು. ಶುಕ್ರವಾರ ಸಂಜೆ ಮನೆ ಸಮೀಪದ ಮಾವಿನ ಮರದಿಂದ ಮಾವಿನ ಹಣ್ಣು ಕೊಯ್ಯಲು ಹೋದಾಗ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
