BANTWAL
ಗ್ಯಾಸ್ ಗೀಝರ್ ಆನ್ ಮಾಡಿ ಸ್ನಾನ ಮಾಡುತ್ತಿದ್ದ ಯುವಕ ಸಾವು
ಬಂಟ್ವಾಳ: ಸ್ನಾನ ಮಾಡುತ್ತಿದ್ದ ವೇಳೆ ಯುವಕನೋರ್ವ ಸಾವನಪ್ಪಿರುವ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತರನ್ನು ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದ್ದು, ಇವರು ಸ್ನಾನದ ಕೊಠಡಿಯಲ್ಲಿ ಗ್ಯಾಸ್ ಗೀಝರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಸ್ನಾನಕ್ಕೆ ತೆರಳಿದ ಇಜಾಝ್ ಅಹ್ಮದ್ ಒಂದು ಗಂಟೆಯಾದರೂ ಹೊರ ಬರದ ಹಿನ್ನೆಲೆಯಲ್ಲಿ ಹಾಗೂ ಕರೆದರೆ ದ್ವನಿ ನೀಡದ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ಆತನ ತಂದೆ ಮತ್ತು ಸಹೋದರರು ಬಾಗಿಲು ಒಡೆದು ನೋಡಿದಾಗ ಆತ ಕೊಠಡಿಯಲ್ಲಿ ಬಿದ್ದಿದ್ದ.
ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆಗೆ ಆತ ಮೃತಪಟ್ಟಿದ್ದ. ಗ್ಯಾಸ್ ಗೀಝರ್ ನಲ್ಲಿ ನೀರು ಬಿಸಿ ಮಾಡುವ ವೇಳೆ ಗೀಝರ್ ನಿಂದ ಹೊರ ಬರುವ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಸಾವು ಸಂಭವಿಸಿದೆ ಎನ್ನಲಾಗಿದೆ.