Connect with us

LATEST NEWS

ಮೂಡಬಿದ್ರೆಯಲ್ಲಿ ಖಾಕಿವರ್ದಿ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗೂಂಡಾಗಿರಿ

ಮೂಡಬಿದ್ರೆಯಲ್ಲಿ ಖಾಕಿವರ್ದಿ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಗೂಂಡಾಗಿರಿ

ಮಂಗಳೂರು, ಜನವರಿ 08 : ಸಿಎಂ ಸಿದ್ದರಾಮಯ್ಯ ಮೂಡುಬಿದಿರೆಗೆ ಆಗಮಿಸಿದ್ದಾಗ ಕಾಂಗ್ರೆಸ್ ಪುಢಾರಿಯೊಬ್ಬ ಪೊಲೀಸ್ ಅಧಿಕಾರಿಯೊಬ್ಬರನ್ನು ದೂಡಿ ನಿಂದಿಸುವ ಮೂಲಕ ದರ್ಪ ಮೆರೆದಿದ್ದಾನೆ.

ದಕ್ಷಿಣ ಕನ್ನಡ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಈ ರೀತಿ ವರ್ತಿಸಿದವನಾಗಿದ್ದು, ಸಿಎಂ ಅಗಮನದ ವೇಳೆ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದ ಎಎಸ್ಐ ಒಬ್ಬರು ಸಿಎಂ ವಾಹನ ಆಗಮಿಸುವಷ್ಟರಲ್ಲಿ ಕಾರ್ಯಕರ್ತರನ್ನು ದೂರ ನಿಲ್ಲುವಂತೆ ಹೇಳಿದ್ದಾರೆ.

ಆದರೆ ಮಿಥುನ್ ರೈ ಪೊಲೀಸ್ ಅಧಿಕಾರಿಯನ್ನು ದೂಡುತ್ತಲೇ ಮುನ್ನುಗ್ಗಿದ್ದು ಈ ದೃಶ್ಯವನ್ನು ಅಲ್ಲಿದ್ದ ಯಾರೋ ಮೊಬೈಲಿನಲ್ಲಿ ಸೆರೆಹಿಡಿದು ಹರಿಯಬಿಟ್ಟಿದ್ದಾರೆ.

ಮೂಡುಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಮಿಥುನ್ ರೈ ವರ್ತನೆಯ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿದೆ.

ವಿಡಿಯೋ..

Share Information
Continue Reading
Advertisement
Click to comment

Leave a Reply

Your email address will not be published. Required fields are marked *