ನಾಂದೇಡ್, ಡಿಸೆಂಬರ್ 01: ಪ್ರೀತಿ ಎಂದೂ ಶಾಶ್ವತ ಎಂಬುದಕ್ಕೆ ಈ ಘಟನೆ ಸಾಕ್ಷಿ. ಮಗಳು ಬೇರೆ ಜಾತಿಯವನನ್ನು ಪ್ರೀತಿಸುತ್ತಿದ್ದಾಳೆಂದು ತಿಳಿದ ಕೂಡಲೆ ಹಿಂದೆ ಮುಂದೆ ನೋಡದೆ ಆ ಯುವಕನನ್ನು ಕಲ್ಲಿನಿಂದ ಜಜ್ಜಿ, ಗುಂಡು ಹಾರಿಸಿ ಹತ್ಯೆ ಮಾಡಿಯೇ ಬಿಟ್ಟರು. ಆತನ ಅಂತ್ಯಕ್ರಿಯೆ ವೇಳೆ ಗೆಳೆಯನ ಕೈಯಿಂದಲೇ ಹಣೆಗೆ ಕುಂಕುಮ ಹಚ್ಚಿಕೊಂಡು ಆತನ ಮನೆಯಲ್ಲಿ ಸೊಸೆಯಾಗಿ ಬಾಳುವುದಾಗಿ ಆಕೆ ಪ್ರತಿಜ್ಞೆ ಮಾಡಿದ್ದಾಳೆ.
ಆಂಚಲ್ ಎಂಬಾಕೆಗೆ ತನ್ನ ಸಹೋದರರ ಮೂಲಕ ಸಕ್ಷಮ್ ಎಂಬಾತನ ಪರಿಚಯವಾಗಿತ್ತು ಅದು ಕ್ರಮೇಣವಾಗಿ ಪ್ರೀತಿಗೆ ತಿರುಗಿತ್ತು. ಮೂರು ವರ್ಷಗಳ ಕಾಲ ಅವರು ಪ್ರೀತಿಸುತ್ತಿದ್ದರು. ಮನೆಯಲ್ಲಿ ವಿಚಾರ ತಿಳಿಸಿದಾಗ ಬೇರೆ ಜಾತಿ ಎಂದು ಯಾರೂ ಮದುವೆಗೆ ಒಪ್ಪಲು ಸಿದ್ಧರಿರಲಿಲ್ಲ. ಹಲವು ಬಾರಿ ಯುವತಿಯ ಮನೆಯವರು ಸಕ್ಷಮ್ಗೆ ಬೆದರಿಕೆ ಹಾಕಿದ್ದರೂ ಅವರಿಬ್ಬರ ಸಂಬಂಧ ಹಾಗೆಯೇ ಮುಂದುವರೆದಿತ್ತು. ಅದಕ್ಕೆ ಕೋಪಗೊಂಡ ಆಂಚಲ್ ಮನೆಯವರು ಆತನನ್ನಯ ಹೊಡೆದು ಕೊಂದಿದ್ದಾರೆ.
ಆತನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಆಕೆ ಆತನ ದೇಹದ ಮೇಲಿದ್ದ ಅರಿಶಿನವನ್ನು ತಾನು ಹಚ್ಚಿಕೊಂಡು ಶವದ ಕೈಯಿಂದ ಹಣೆಗೆ ಕುಂಕುಮ ಹಚ್ಚಿಕೊಂಡು ಸತಿ, ಪತ್ನಿಯರಾದರು.ಕೊನೆಯವರೆಗೂ ಆತನ ಪತ್ನಿಯಾಗಿಯೇ ವಾಸಿಸಲು ನಿರ್ಧರಿಸಿದ್ದಳು. ಸಕ್ಷಮ್ ಮೃತಪಟ್ಟರೂ ಕೂಡ ಅವರ ಪ್ರೀತಿ ಗೆದ್ದಿತ್ತು. ಪ್ರೀತಿ ಮುಂದೆ ಸಹೋದರರು, ಅಪ್ಪ ಅಮ್ಮ ಎಲ್ಲರೂ ಸೋತರು. ಆತನನ್ನು ಕೊಂದವರಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಲಾಯಿತು. ಆರು ಆರೋಪಿಗಳ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.