LATEST NEWS
ವೆನ್ಲಾಕ್ ಆಸ್ಪತ್ರೆಯಲ್ಲಿ ಕರೆಂಟ್ ತಗುಲಿ ಯುವಕ ಸಾವು- ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಮಂಗಳೂರು ಮಾರ್ಚ್ 8: ಆಸ್ಪತ್ರೆಯ ಕ್ಯಾಂಟಿನ್ ನಲ್ಲಿ ನೆಲ ಒರೆಸುತ್ತಿರುವ ಸಂದರ್ಭ ವಿದ್ಯುತ್ ತಗುಲಿ ಯುವಕನೊಬ್ಬ ಸಾವನಪ್ಪಿರುವ ಘಟನೆ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಕೋಟೆಕಾರು ಬೀರಿ ನಿವಾಸಿ ಭಗವಾನ್ ಎಂಬವರ ಪುತ್ರ ಅನೀಸ್ (20) ಎಂದು ಗುರುತಿಸಲಾಗಿದ್ದು, ಈತ ನಗರದ ಕೆಪಿಟಿಯಲ್ಲಿ ಡಿಪ್ಲೊಮಾ ವಿದ್ಯಾರ್ಥಿಯೂ ಆಗಿದ್ದುಸ ವಿಧ್ಯಾಭ್ಯಾಸ ಮಾಡಿಕೊಂಡು ವೆನ್ಲಾಕ್ ಸರಕಾರಿ ಆಸ್ಪತ್ರೆಯ ಕ್ಯಾಂಟಿನ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ,
ಕರೆಂಟ್ ಶಾಕ್ ನ ವಿಡಿಯೋ ಸಿಸಿಟಿವಿಯಲ್ಲಿ ದಾಖಲಾಗಿದೆ. ಘಟನೆ ಕುರಿತಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.