DAKSHINA KANNADA
ಎತ್ತಿನಹೊಳೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಶಾಸಕ ಅಶೋಕ್ ರೈ
ಪುತ್ತೂರು ಫೆಬ್ರವರಿ 03: ಎತ್ತಿನಹೊಳೆ ವಿಚಾರ ಇದೀಗ ಮತ್ತೆ ಸುದ್ದಿಗೆ ಬಂದಿದ್ದು, ತನ್ನ ಸರಕಾರದ ವಿರುದ್ದವೇ ಪುತ್ತೂರು ಶಾಸಕ ಅಶೋಕ್ ರೈ ಅಸಮಾಧಾನ ಹೊರಹಾಕಿದ್ದಾರೆ.
ಪುತ್ತೂರಿನಲ್ಲಿ ಮಾತನಾಡಿದ ಅವರು ಸರ್ಕಾರ ಎತ್ತಿನಹೊಳೆ ಯೋಜನೆಗೆ 24 ಸಾವಿರ ಕೋಟಿ ಕೊಡ್ತಿರಿ? ಆದರೆ ಪಶ್ವಿಮವಾಹಿನಿ ಯೋಜನೆಗೆ ಹಣ ಕೇಳಿದರೆ ಇಲ್ಲ ಅಂತ ಹೇಳ್ತಿರಿ, ಹಾಗಾದ್ರೆ ನಮಗೆ ಏನಿದೆ ಸ್ವಾಮಿ? ಎಂದು ಪ್ರಶ್ನಿಸಿದರು.
ಎತ್ತಿನಹೊಳೆಗೆ ನೀರು ಹರಿಸಿದರೆ ನಮಗೆ ನೀರಿನ ಸಮಸ್ಯೆ ಖಂಡಿತ ಎದುರಾಗುತ್ತೆ, ಮುಂದಿನ 15 ವರ್ಷಗಳಲ್ಲಿ ಕರಾವಳಿಯಲ್ಲಿ ನೀರಿನ ಬರ ಎದುರಾಗುತ್ತೆ, ಎತ್ತಿನ ಹೊಳೆ ಯೋಜನೆಯ ಕುರಿತಂತೆ 45 ಶಾಸಕರ ಸಭೆ ಕರೆದಿದ್ರು ನಾನೊಬ್ಬನೇ ನದಿ ತೀರದಲ್ಲಿರೋ ಶಾಸಕ. ಉಳಿದೆಲ್ಲ ಶಾಸಕರು ಸಮುದ್ರ ಮತ್ತು ಇತರ ಭಾಗದವರು, ನಮಗೆ ಶಾಶ್ವತ ನೀರು ಸಿಗುವ ಎರಡು ಯೋಜನೆಗಳನ್ನ ಸರ್ಕಾರದ ಮುಂದಿಟ್ಟಿದ್ದೇನೆ, ಉಪ್ಪಿನಂಗಡಿಯಲ್ಲಿ 151 ಕೋಟಿ ವೆಚ್ಚದ ಡ್ಯಾಂ, ಕಠಾರದಲ್ಲಿ 250 ಕೋಟಿ ವೆಚ್ಚದ ಡ್ಯಾಂ , ಈ ಎರಡು ಡ್ಯಾಂಗಳು ನಿರ್ಮಾಣವಾದ್ರೆ ನಮಗೆ ನೀರಿನ ಸಮಸ್ಯೆ ಬರಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ. ಸರಕಾರ ಈ ಯೋಜನೆಗಳಿಗೆ ಹಣ ಇಲ್ಲ ಎನ್ನುತ್ತಿದೆ ಎಂದು ಅವರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಕಾಂಗ್ರೆಸ್ ಶಾಸಕ ಅಶೋಕ್ ರೈ.