LATEST NEWS
ಉಡುಪಿ ಕುಂದಾಪುರದಲ್ಲಿ ಸುರಿದ ಹಳದಿ ಮಳೆ

ಉಡುಪಿ ಕುಂದಾಪುರದಲ್ಲಿ ಸುರಿದ ಹಳದಿ ಮಳೆ
ಉಡುಪಿ ಅಗಸ್ಟ್ 4: ಉಡುಪಿ ಜಿಲ್ಲೆಯ ಕೆಲವು ಕಡೆಗಳಲ್ಲಿ ಶುಕ್ರವಾರ ಹಳದಿ ಬಣ್ಣದ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಶುಕ್ರವಾರ ಸಂಜೆ ಜಿಲ್ಲೆಯ ಹಲವೆಡೆ ತುಂತುರು ಮಳೆ ಸುರಿದಿದ್ದು, ಹಳದಿ ಬಣ್ಣದ ಹನಿಗಳು ಕಾಣಿಸಿಕೊಂಡಿದೆ.
ನಗರದ ಕೆಲವು ಕಡೆಗಳಲ್ಲಿ ನಿಲ್ಲಿಸಿದ ವಾಹನಗಳ ಮೇಲೆ ಸುರಿದ ಮಳೆ ಸ್ವಲ್ಪ ಸಮಯ ನಂತರ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡು ಬಂದಿದೆ. ಬೈಕ್ ಮತ್ತು ಕಾರಿನ ಮೇಲೆ ಬಿದ್ದ ಹನಿಗಳು ಒಣಗುತ್ತಿದ್ದಂತೆಯೇ ಹಳದಿ ಬಣ್ಣಕ್ಕೆ ತಿರುಗಿದೆ. ಧೂಳಿನ ಮೇಲೆ ಮಳೆ ಬಿದ್ದಿರಬಹುದು ಎಂದು ಹಲವರು ಅಂದುಕೊಂಡಿದ್ದರು. ಆದ್ರೆ ಉಡುಪಿ ನಗರದ ಹಲವು ಭಾಗ ಮತ್ತು ಕುಂದಾಪುರದ ಹಲವೆಡೆ ಅರಶಿನ ಬಣ್ಣದ ಮಳೆಹನಿ ಅಲ್ಲಲ್ಲಿ ಬಿದ್ದಿದೆ.

ಈ ಕುರಿತು ಸ್ಪಷ್ಟನೆ ನೀಡಿದ ಪರಿಸರ ವಿಜ್ಞಾನಿ ಎನ್.ಎ.ಮಧ್ಯಸ್ಥರವರು ತೆಂಗಿನ ಗರಿಗಳ ಕೆಳ ಭಾಗದಲ್ಲಿ ಬಿಳಿ ಬಣ್ಣದ ಕೀಟಗಳು ಇದ್ದು, ಇವು ಆಗಸ್ಟ್ ತಿಂಗಳ ಸುಮಾರಿಗೆ ಹೆಚ್ಚಾಗಿ ಕಂಡುಬರುತ್ತವೆ. ಕೀಟಗಳು ಬೆಳೆದ ನಂತರ ಅವುಗಳು ಪುಡಿಪುಡಿಯಾಗಿ ವಾತಾವರದಲ್ಲಿ ಸೇರಿಕೊಂಡಿರುತ್ತವೆ. ಗಾಳೆ ಮಳೆ ಜೊತೆಯಾದರೆ ತೆಂಗಿನ ಗರಿಯಲ್ಲಿದ್ದ ಹಳದಿ ಮಿಶ್ರಿತ ಬಿಳಿ ಕೀಟಗಳು ಮಳೆ ಹನಿಗಳ ಜೊತೆ ನೆಲಕ್ಕೆ ಬೀಳುವುದರಿಂದ ಹಳದಿ ಮಿಶ್ರಿತ ಮಳೆಯಾಗಿದೆ ಎಂದು ತಿಳಿಸಿದ್ದಾರೆ.