LATEST NEWS
ದಕ್ಷಿಣಕನ್ನಡ ಉಡುಪಿ ಜಿಲ್ಲೆಯಲ್ಲಿ ಮಳೆ ಅಬ್ಬರ – ಯಲ್ಲೋ ಅಲರ್ಟ್
ಮಂಗಳೂರು ಜನವರಿ 04 : ಕರಾವಳಿ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು. ಜನವರಿ ತಿಂಗಳಲ್ಲಿ ಬಂದ ಅಕಾಲಿಕ ಮಳೆ ಶುಕ್ರವಾರದವರೆಗೂ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಅರಬ್ಬಿ ಸಮುದ್ರದಲ್ಲಿ (Arabian Sea) ವಾಯುಭಾರ ಕುಸಿತ ಕಾಣಿಸಿಕೊಂಡಿರುವ ಹಿನ್ನೆಲೆ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ (Rain) ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಗೆ ಇಂದು ಮತ್ತು ನಾಳೆ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಗುಡುಗಿನಿಂದ ಕೂಡಿದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುರುವಾರ ಬೆಳಿಗ್ಗೆ 8.30ರವರೆಗಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯ ಕೋಡಿಯಲ್ಲಿ 85 ಮಿ.ಮೀ, ಪಾಂಡೇಶ್ವರದಲ್ಲಿ 57, ವಡ್ಡರ್ಸೆಯಲ್ಲಿ 50, ಕರ್ಜೆಯಲ್ಲಿ 41, ಉದ್ಯಾವರದಲ್ಲಿ 39, ಕುಂಬಾಸಿಯಲ್ಲಿ 38, ಬೀಜಾಡಿಯಲ್ಲಿ 37.5, ಕಾಪು ಕೋಟೆಯಲ್ಲಿ ಮತ್ತು ಕೋಟೇಶ್ವರದಲ್ಲಿ 36.5, ವಾರಂಬಳ್ಳಿಯಲ್ಲಿ 35, ದಕ್ಷಿಣ ಕನ್ನಡ ಜಿಲ್ಲೆಯ ಸರಪಾಡಿಯಲ್ಲಿ 54 ಬಳ್ಕುಂಜೆಯಲ್ಲಿ 23 ಮಿ.ಮೀ, ಕಿಲ್ಪಾಡಿಯಲ್ಲಿ 18.5 ಮಿ.ಮೀ, ಕಾವಳಪಡೂರಿನಲ್ಲಿ 19.5, ಬಡಗಬೆಳ್ಳೂರು, ನಾವೂರು ಮತ್ತು ಪಲ್ಲಡ್ಕದಲ್ಲಿ ತಲಾ 16 ಮಿ.ಮೀ, ಕಾವಳಮೂಡೂರು, ಚೆನ್ನೈತ್ತೋಡಿ ಮತ್ತು ಪಡುಮಾರ್ನಾಡಿನಲ್ಲಿ ತಲಾ 14.5 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.