FILM
ಏಕ್ತಾ ಕಪೂರ್ ಗೆ ಛಾಟಿ ಬೀಸಿದ ಸುಪ್ರೀಂಕೋರ್ಟ್
ನವದೆಹಲಿ ಅಕ್ಟೋಬರ್ 15: ಏಕ್ತಾ ಕಪೂರ್ ಅವರ ಓಟಿಟಿ ವೆಬ್ ಸೀರಿಸ್ ಗಳ ಬಗ್ಗೆ ಸುಪ್ರೀಂ ಕೋರ್ಟ್ ಅಸಮಧಾನ ವ್ಯಕ್ತಪಡಿಸಿದ್ದು, ನೀವು ದೇಶದಲ್ಲಿನ ಯುವಜನತೆಯ ಮನಸ್ಸನ್ನು ಹಾಳು ಮಾಡುತ್ತಿದ್ದೀರಿ ಎಂದು ಹೇಳಿದೆ.
XXX ವೆಬ್ ಸಿರೀಸ್‌ನಲ್ಲಿ ಯೋಧರ ಪತ್ನಿಯಂದಿರ ಭಾವನೆಗೆ ಧಕ್ಕೆ ತರುವ ಅಂಶಗಳಿವೆ ಎಂದು ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ದೂರು ದಾಖಲಾಗಿತ್ತು. ಏಕ್ತಾ ಕಪೂರ್ ಹಾಗೂ ಅವರ ತಾಯಿಗೆ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿತ್ತು. ಇದನ್ನು ಏಕ್ತಾ ಕಪೂರ್ ಪ್ರಶ್ನೆ ಮಾಡಿದ್ದರು. ಏಕ್ತಾ ಕಪೂರ್ ಪರವಾಗಿ, ಹಿರಿಯ ವಕೀಲ ಮುಕುಲ್ ರೊಹಟಗಿ ಅವರು ವಾದ ಮಾಡಿದ್ದಾರೆ. ಏಕ್ತಾ ಕಪೂರ್ ಅವರ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ, ಇನ್ನು ಪಾಟ್ನಾ ಹೈಕೋರ್ಟ್‌ನಲ್ಲಿ ಕೂಡ ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆಯಾಗಬೇಕಿದೆಯಂತೆ.
“ನೀವು ದೇಶದಲ್ಲಿನ ಯುವಜನತೆಯ ಮನಸ್ಸನ್ನು ಹಾಳು ಮಾಡುತ್ತಿದ್ದೀರಿ. ನಿಮ್ಮ ಕಂಟೆಂಟ್ ಎಲ್ಲರಿಗೂ ಲಭ್ಯವಿದೆ. ನೀವು ಜನರಿಗೆ ಯಾವ ರೀತಿಯ ಕಂಟೆಂಟ್ ನೀಡುತ್ತಿದ್ದೀರಿ?” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
“ನೀವು ಪ್ರತಿ ಬಾರಿ ಈ ರೀತಿ ವಿಚಾರಕ್ಕೆ ಕೋರ್ಟ್‌ನಲ್ಲಿ ಮುಖಾಮುಖಿಯಾಗುತ್ತೀರಿ. ನಾವು ಇದನ್ನು ಮೆಚ್ಚುವುದಿಲ್ಲ. ನಮ್ಮ ನಿರ್ಧಾರವನ್ನು ಪ್ರಶ್ನೆ ಮಾಡಿದರೆ ನಾವು ದಂಡ ವಿಧಿಸುತ್ತೇವೆ. ಏಕ್ತಾ ಕಪೂರ್ ಅವರಿಗೆ ಇದನ್ನು ಮುಕುಲ್ ಅವರು ಅರ್ಥ ಮಾಡಿಸಬೇಕು ಎಂದಿದೆ.