DAKSHINA KANNADA
ಭಾರತ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಮಾಯ….

ಪುತ್ತೂರು: ಅರ್ಧ ಕಾಶ್ಮೀರವೇ ಮಾಯವಾಗಿರುವ ಭಾರತದ ಭೂಪಟವನ್ನು ಹಂಚಿಕೊಂಡು ಪದವಿಪೂರ್ವ ಶಿಕ್ಷಣ ಇಲಾಖೆ ಎಡವಟ್ಟು ಮಾಡಿಕೊಂಡಿದೆ. ವಿಧ್ಯಾರ್ಥಿಗಳಿಗೆ ದ್ವಿತಿಯ ಪಿಯುಸಿ ಪೂರ್ವಬಾವಿ ಪರೀಕ್ಷೆಯಲ್ಲಿ ಈ ತಿರುಚಿದ ಭಾರತದ ನಕ್ಷೆಯನ್ನು ವಿದ್ಯಾರ್ಥಿಗಳಿಗೆ ಪ್ರಶ್ನಪತ್ರಿಕೆಯಲ್ಲಿ ಹಂಚಿದೆ
ಮಾರ್ಚ್ 19 ರಂದು ಶನಿವಾರ ನಡೆದ ದ್ವಿತೀಯ ಪಿಯು ಪ್ರಿಪರೇಟರಿ ಪರೀಕ್ಷೆಯ ಇತಿಹಾಸ ಪ್ರಶ್ನೆಪತ್ರಿಕೆಯಲ್ಲಿ ಭಾರತದ ನಕ್ಷೆಯನ್ನು ಪಾಕ್ ಆಕ್ರಮಿತ ಕಾಶ್ಮೀರದ ಭಾಗವನ್ನು ಹೊರತುಪಡಿಸಿ ನೀಡಲಾಗಿದೆ. ಪಾಕಿಸ್ತಾನ ಪ್ರಚುರಪಡಿಸುವ ಭಾರತದ ನಕ್ಷೆಯನ್ನು ದಕ್ಷಿಣಕನ್ನಡ ಜಿಲ್ಲಾ ಪಿಯು ಬೋರ್ಡ್ ವಿದ್ಯಾರ್ಥಿಗಳಿಗೆ ಹಂಚಿರುವುದು ಇದೀಗ ಇದೀಗ ಭಾರೀ ಚರ್ಚೆಗೂ ಕಾರಣವಾಗಿದೆ.
