DAKSHINA KANNADA
ಮಂಗಳೂರು ವಿಮಾನ ನಿಲ್ದಾಣದಲ್ಲಿ 14.50 ಲ.ರೂ. ಮೌಲ್ಯದ ಚಿನ್ನದ ಪೌಡರ್ ವಶಕ್ಕೆ..!

ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 242 ಗ್ರಾಂ ತೂಕದ, 14.50 ಲಕ್ಷ ರೂ ಮೌಲ್ಯದ ಚಿನ್ನದ ಪೌಡರ್‌ನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಂಗಳೂರು: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ 242 ಗ್ರಾಂ ತೂಕದ, 14.50 ಲಕ್ಷ ರೂ ಮೌಲ್ಯದ ಚಿನ್ನದ ಪೌಡರ್‌ನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ದುಬೈನಿಂದ ಏರ್‌ಇಂಡಿಯಾ ವಿಮಾನದಲ್ಲಿ ಬರುತ್ತಿದ್ದ ಪ್ರಯಾಣಿಕ ಚಿನ್ನದ ಪುಡಿಯನ್ನು ರಟ್ಟಿನ ಬಾಕ್ಸ್‌ನೊಳಗೆ ನಾಲ್ಕು ಕಾರ್ಬನ್ ಪೇಪರ್‌ಗಳಲ್ಲಿ ಸುತ್ತಿಟ್ಟು ಸಾಗಿಸುತ್ತಿದ್ದ.
ಸಂಶಯದ ಮೇರೆಗೆ ಪರಿಶೀಲಿಸಿದಾಗ ಈ ಅಕ್ರಮ ಚಿನ್ನದ ಸಾಗಾಟ ಜಾಲ ಪತ್ತೆಯಾಗಿದೆ.
ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.