BANTWAL
ಬಂಟ್ವಾಳ – ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಲಾರಿ – ಓರ್ವ ಸಾವು

ಬಂಟ್ವಾಳ ಮೇ 30: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಪರಿಣಾಮ ಕಾರ್ಮಿಕ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮೃತರನ್ನು ಜಾರ್ಖಾಂಡ್ ಮೂಲದ ನಿರ್ಮಲಾ ಅನ್ಸ್ತಾ (32) ಮೃತ ಕಾರ್ಮಿಕ. ಲಾರಿ ಚಾಲಕ ಸುಜಿತ್ ಕ್ಲೀನರ್ ಸಿಮೋಹನ್ ಮುರ್ಮ ಯಾವುದೇ ಗಾಯವಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಅಕ್ಕಿ ಲೋಡ್ ಲಾರಿ ಬಂಟ್ವಾಳದ ಎಸ್ವಿ.ಎಸ್.ಕಾಲೇಜು ಬಳಿ ಬರುವಾಗ ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಉಡುಪಿಯಿಂದ ಅಕ್ಕಿ ಲೋಡ್ ಮಾಡಿಕೊಂಡು ಮೂಡಬಿದಿರೆಯಾಗಿ ಬಂಟ್ವಾಳಕ್ಕೆ ಬರುವ ವೇಳೆ ಈ ಘಟನೆ ನಡೆದಿದೆ. ಅಕ್ಕಿ ಲೋಡ್ ನ ಮೇಲೆ ಅಂದರೆ ಲಾರಿಯ ಹಿಂಬಾಗದಲ್ಲಿ ಕುಳಿತುಕೊಂಡಿದ್ದ ಕಾರ್ಮಿಕ ಲಾರಿ ಪಲ್ಟಿಯಾದ ವೇಳೆ ರಸ್ತೆಗೆ ಎಸೆಯಲ್ಟಟ್ಟು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್.ಐ.ಸುತೇಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
