Connect with us

LATEST NEWS

ಅಂಗಡಿಯವನ ಮುಂದೆಯೆ ಹೊಸ ಬಟ್ಟೆಯ ಟ್ರಯಲ್ ನೋಡಿದ ಯುವತಿ – ವಿಡಿಯೋ ವೈರಲ್

ನವದೆಹಲಿ ಎಪ್ರಿಲ್ 13 : ಅಂಗಡಿಯಲ್ಲಿ ಹೊಸ ಬಟ್ಟೆ ಖರೀದಿ ಮಾಡಿದರೆ ನಾವು ಟ್ರಯಲ್ ರೂಂ ನಲ್ಲಿ ಅದನ್ನು ಹಾಕಿ ಚೆಕ್ ಮಾಡುತ್ತೇವೆ. ಆದರೆ ಯುವತಿಯೊಬ್ಬಳು ಅಂಗಡಿಯವನ ಮುಂದೆಯೆ ಹೊಸ ಬಟ್ಟೆಯ ಟ್ರಯಲ್ ನೋ಼ಡಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೆಹಲಿಯ ಪಾಲಿಕಾ ಬಜಾರ್ ಪ್ರದೇಶದಲ್ಲಿ ಚಿತ್ರೀಕರಿಸಲಾದ ಘಟನೆಯ ವೀಡಿಯೋದಲ್ಲಿ ಮಹಿಳೆಯು ಅಂಗಡಿಯಲ್ಲಿ ಉಳಿದುಕೊಂಡಿದ್ದ ಅಂಗಡಿಯ ಮಾಲೀಕರ ಮುಂದೆಯೇ ತಾನು ತಗೆದುಕೊಂಡ ಬಟ್ಟೆಯ ಟ್ರಯಲ್ ನೋಡಿದ್ದಾಳೆ.
ವೀಡಿಯೋದ ಮೊದಲ ಭಾಗದಲ್ಲಿ, ಮಹಿಳೆ ತನ್ನ ಬಟ್ಟೆಗಳನ್ನು ಬದಲಾಯಿಸುವಾಗ, ಅಂಗಡಿಯ ಇನ್ನೊಂದು ತುದಿಯಲ್ಲಿ ಅಂಗಡಿಯವನು ಇನ್ನೊಂದು ಬದಿಯಲ್ಲಿ ನಿಂತಿರುವುದು ಕಂಡುಬಂದಿದೆ. ಆದಾಗ್ಯೂ, ನಂತರ ವೀಡಿಯೊದಲ್ಲಿ, ಅವನು ಅವಳ ಮುಂದೆ ನಿಂತಿರುವುದನ್ನು ಕಾಣಬಹುದು.

ಈ ವಿಡಿಯೋ ಇದೀಗ ವೈರಲ್ ಆಗಿದ್ದು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. “ಹೊಸದೇನೂ ಇಲ್ಲ, ಇದು ಪಾಲಿಕಾ ಬಜಾರ್ ಆಗಿರಬೇಕು ಎಂದು ಕಮೆಂಟ್ ಮಾಡಿದ್ದಾರೆ. ಚ್ಚಿನ ಸಾಮಾಜಿಕ ತನದಲ್ಲಿನ ಪೋಸ್ಟ್ ಗಳು ದೆಹಲಿಯ ಪಾಲಿಕಾ ಬಜಾರ್‌ನಳ್ಳಿ ನಡೆದಿದೆ ಎಂದು ಹೇಳಿಕೊಂಡಿದ್ದರೂ, ಕೆಲವರು ಗೋವಾದ ಬಟ್ಟೆ ಅಂಗಡಿಯಲ್ಲಿ ನಡೆದ ಘಟನೆ ಎಂದೂ ಹೇಳಿದ್ದಾರೆ. ಇಂತಹ ರೀಲ್ ಜ್ವರವು ಸಾರ್ವಜನಿಕ ಸ್ಥಳಗಳಾದ ಮೆಟ್ರೋಗಳು, ಬಸ್‌ಗಳು ಮತ್ತು ಇತರ ರೀತಿಯ ಸಾರ್ವಜನಿಕ ಸಾರಿಗೆಯನ್ನು ಆಕ್ರಮಿಸಿಕೊಂಡಿದ್ದು, ಜನರಿಗೆ ಉಪದ್ರವದ ಮೂಲವಾಗಿದೆ ಎಂದು ಹಲವಾರು ಮಂದಿ ಆಕ್ರೋಶ ಹೊರ ಹಾಕಿದ್ದಾರೆ.

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *