KARNATAKA
ಬೆಂಗಳೂರು – ಚಲಿಸುತ್ತಿದ್ದ ರೈಲಿನ ಅಡಿ ಮಲಗಿ ಜೀವ ಉಳಿಸಿಕೊಂಡ ಮಹಿಳೆ – ವಿಡಿಯೋ ವೈರಲ್

ಬೆಂಗಳೂರು ಅಗಸ್ಟ್ 29 : ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಅಂಗಾತ ಮಲಗಿ ಮಹಿಳೆಯೊಬ್ಬರು ಜೀವ ಉಳಿಸಿಕೊಂಡಿರುವ ಘಟನೆ ನಡೆದಿದ್ದು, ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ರಾಜನುಕುಂಟೆ ಲೆವೆಲ್ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದ್ದು, ಇಲ್ಲಿ ರೈಲು ನಿಂತಿದ್ದು, ಸ್ಥಳಿಯ ನಿವಾಸಿಗಳು ರೈಲಿನ ಅಡಿಯಲ್ಲೇ ನುಗ್ಗಿ ಆ ಬದಿಗೆ ತೆರಳುತ್ತಿದ್ದರು. ಈ ವೇಳೆ ರೈಲು ಏಕಾಏಕಿ ಚಲಿಸಲಾರಂಭಿಸಿದೆ. ವಿಚಲಿತರಾಗದ ಮಹಿಳೆ, ರೈಲಿನ ಅಡಿಯಲ್ಲಿ ಅಂಗಾತ ಮಲಗಿದ್ದಾರೆ. ರೈಲು ಸಾಗಿ ಹೋದ ನಂತರ ಎದ್ದು ಬಂದಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಸಮಯಪ್ರಜ್ಞೆ ಆಕೆಯ ಜೀವ ಉಳಿಸಿದೆ.
