KARNATAKA
ಶಿವಮೊಗ್ಗ – ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದ ಮಹಿಳೆಯ ರಕ್ಷಣೆ -ವಿಡಿಯೋ ವೈರಲ್

ಶಿವಮೊಗ್ಗ ನವೆಂಬರ್ 10:ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಮಹಿಳೆಯೊಬ್ಬರು ಆಯತಪ್ಪಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಅಲ್ಲೇ ಇದ್ದ ರೈಲ್ವೆ ಪೊಲೀಸರು ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ.
ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಈ ಘಟನೆ ಸಂಭವಿಸಿದೆ. ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆ ರೈಲು ಏರಿದ್ದರು. ರೈಲು ಹೊರಡುತ್ತಿದ್ದಂತೆ ಗಾಬರಿಯಿಂದ ಕೆಳಗಿಳಿಯಲು ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ಮಹಿಳೆಯ ಕೈ ಹಿಡಿದು ಕೆಳಗಿಳಿಸುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ಲಾಟ್ ಫಾರಂ ಮೇಲೆ ನಿಂತಿದ್ದ ರೈಲ್ವೆ ಪೊಲೀಸರು ಪ್ರಾಣದ ಹಂಗು ತೊರೆದು ಮಹಿಳೆಯ ರಕ್ಷಣೆ ಮಾಡಿದ್ದಾರೆ. ರೈಲ್ವೆ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.