BELTHANGADI
ಮಹಿಳೆ ನಾಪತ್ತೆ; ಗುಂಡ್ಯ ಹೊಳೆಗೆ ಹಾರಿರುವ ಶಂಕೆ !

ಬೆಳ್ತಂಗಡಿ ಜುಲೈ 31: ಮಹಿಳೆಯೋರ್ವರು ಬೆಳಗ್ಗೆ ಮನೆಯಿಂದ ಸೊಪ್ಪು ತರಲು ಹೊರ ಹೋದವರು ಹಿಂತಿರುಗಿ ಬಾರದೇ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ನೇಲ್ಯಡ್ಕ ಬಳಿಯ ಉರ್ನಡ್ಕ ಸುಂದರ ಗೌಡ ಎಂಬವರ ಪತ್ನಿ ಶಕುಂತಲಾ ನಾಪತ್ತೆಯಾದವರು.
ಶಕುಂತಲಾ ಅವರು ಬೆಳಗ್ಗೆ ಸೊಪ್ಪು ತರಲೆಂದು ಮನೆಯಿಂದ ಹೊರ ಹೋದವರು ಮನೆಗೆ ಬಾರದೇ ನಾಪತ್ತೆ ಆಗಿದ್ದಾರೆ ಎನ್ನಲಾಗಿದೆ. ಇದೀಗ ಅವರ ಚಪ್ಪಲಿಗಳು ಉದನೆಯ ಗುಂಡ್ಯ ನದಿ ದಡದಲ್ಲಿ ಪತ್ತೆಯಾಗಿದ್ದು, ಮಹಿಳೆ ನದಿಗೆ ಹಾರಿರಬಹುದೆಂದು ಶಂಕೆ ವ್ಯಕ್ತವಾಗಿದೆ.
ನಾಪತ್ತೆಯಾದ ಮಹಿಳೆ ಬೆಳಗ್ಗೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ತನ್ನ ಹಿರಿಯ ಮಗನಿಗೆ ಕರೆ ಮಾಡಿ ತಮ್ಮನ ಮದುವೆ ಜವಾಬ್ದಾರಿ ನೀನೆ ನೋಡಿಕೊಳ್ಳಬೇಕು ಎಂದು ಹೇಳಿದ್ದರು ಎನ್ನಲಾಗಿದೆ ಇದರಿಂದ ಮಹಿಳೆ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಎಂಬ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ಸಿಕ್ಕಂತಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದವರು, ಸ್ಥಳೀಯರು ಹಾಗು ಮುಳುಗು ತಜ್ಞರು ಆಗಮಿಸಿ ತೀವ್ರ ಶೋಧ ಕಾರ್ಯ ಆರಂಭಿಸಿದ್ದಾರೆ. ನದಿ ತುಂಬಿ ಹರಿಯುತ್ತಿರುವದರಿಂದ ಶೋಧ ಕಾರ್ಯ ವಿಳಂಬವಾಗುತ್ತಿದೆ ಎಂದು ವರದಿಯಾಗಿದೆ.