Connect with us

DAKSHINA KANNADA

ರಾಜ್ಯದಲ್ಲಿ ಮಹಿಳೆಯರಿಬ್ಬರ  ಹತ್ಯೆ ಬಗ್ಗೆ ಗೃಹ ಇಲಾಖೆಯ ಇಬ್ಬಗೆಯ ನೀತಿಗೆ  ವಿಮೆನ್ ಇಂಡಿಯಾ ಮೂವ್ಮೆಂಟ್ ಖಂಡನೆ

ಮಂಗಳೂರು : ರಾಜ್ಯದಲ್ಲಿ ರುಕ್ಸಾನ ಹಾಗೂ ನೇಹ ಎಂಬ ಮಹಿಳೆಯರಿಬ್ಬರ ಕೊಲೆಯು ಅತ್ಯಂತ ಖಂಡನೀಯ ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್  ಹೇಳಿದೆ. ಈ ಬಗ್ಗೆ  ಹೇಳಿಕೆ ಬಿಡುಗಡೆ ಮಾಡಿರುವ  ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಸ್ರಿಯಾ ಬೆಳ್ಳಾರೆ ಈ ಬಗ್ಗೆ ಸಂಘ ಪರಿವಾರ ಮತ್ತು ಗೃಹ ಇಲಾಖೆಯ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.


ಅಪರಾಧ ಕೃತ್ಯಗಳನ್ನು ಧರ್ಮಾಧಾರಿತವಾಗಿ ವಿಂಗಡಿಸಿ ನಡೆಸುವ ಕಾರ್ಯಾಚರಣೆಯು ಸಂವಿಧಾನ ವಿರೋಧಿಯಾಗಿದ್ದು ಮಹಿಳೆಯರಿಗೆ ಮಾಡುವ ಅನ್ಯಾಯವಾಗಿದೆ.
ಇದರಿಂದಾಗಿ ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಕೃತ್ಯಗಳು ಜಾಸ್ತಿಯಾಗುತ್ತವೆಯೇ ಹೊರತು ಕಮ್ಮಿಯಾಗಲಾರದು.

ರುಕ್ಸಾನ ವಿಚಾರದಲ್ಲಿ ಮೌನವಾಗಿರುವ ಸರಕಾರ, ಸಂಘ ಪರಿವಾರದ ಅಜೆಂಡದ ಕೈಗೊಂಬೆಯಂತಾಗಿ ನೇಹಾಳ ವಿಚಾರವನ್ನು ಮಾತ್ರ ಗಂಭೀರವಾಗಿ ಪರಿಗಣಿಸುತ್ತಿರುವುದು ಖಂಡನೀಯ.ಮಾಧ್ಯಮಗಳು ಕೂಡ ಇದಕ್ಕೆ ಕುಮ್ಮಕ್ಕು ನೀಡುತ್ತಾ ತಮ್ಮ ಪತ್ರಿಕಾ ಧರ್ಮಕ್ಕೆ ಅಪಚಾರವೆಸಗುತ್ತಿವೆ.

ಅಪರಾಧ ಕೃತ್ಯಗಳನ್ನು ರಾಜಕೀಯಕ್ಕೆ ಬಳಸಿ,ಸಮಾಜದಲ್ಲಿ ಅರಾಜಕತೆ ಸೃಷ್ಟಿಸಿ ಮತ ಬ್ಯಾಂಕನ್ನು ಭದ್ರಪಡಿಸಲು ಯತ್ನಿಸುತ್ತಿರುವ ಸಂಘ ಪರಿವಾರವನ್ನು ಹದ್ದುಬಸ್ತಿನಲ್ಲಿಟ್ಟು ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕು. ಆರೋಪಿಗಳೀರ್ವರನ್ನೂ ಸೂಕ್ತ ವಿಚಾರ ನಡೆಸಿ ಕಠಿಣ ಶಿಕ್ಷೆ ವಿಧಿಸುವ ಮೂಲಕ ಸಂತ್ರಸ್ತರೀರ್ವರಿಗೂ ನ್ಯಾಯ ಒದಗಿಸಬೇಕು ಎಂದು ವಿಮೆನ್ ಇಂಡಿಯಾ ಮೂವ್ಮೆಂಟ್ ಒತ್ತಾಯಿಸುತ್ತದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಸ್ರಿಯಾ ಬೆಳ್ಳಾರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *