BELTHANGADI
ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ನೂತನ ಕ್ಷೇತ್ರ ಸಮಿತಿ ಅಸ್ತಿತ್ವಕ್ಕೆ
ಬೆಳ್ತಂಗಡಿ : ವುಮೆನ್ ಇಂಡಿಯಾ ಮೂವ್ಮೆಂಟ್ (ವಿಮ್) (Women India Movement)ಕ್ಷೇತ್ರ ಸಮಿತಿ ಬೆಳ್ತಂಗಡಿ ಇದರ ಪ್ರತಿನಿಧಿ ಸಭೆಯು ನಿಕಟಪೂರ್ವ ಅಧ್ಯಕ್ಷರಾದ ಶಮಾ ಅವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿಯಲ್ಲಿ ಬುಧವಾರ ನಡೆಯಿತು.
ಮುಖ್ಯ ಅತಿಥಿಯಾಗಿ SDPI ಪುತ್ತೂರು ಕ್ಷೇತ್ರ ಸಮಿತಿ ಸದಸ್ಯರಾದ ಹಾಜಿ ಇಬ್ರಾಹಿಂ ಸಾಗರ್ ಆಗಮಿಸಿದ್ದರು.ಚುನಾವಣಾ ಅಧಿಕಾರಿಯಾಗಿ ಆಗಮಿಸಿದ್ದ ಜಿಲ್ಲಾ ಸಮಿತಿ ಸದಸ್ಯೆ ಝಾಯಿದಾ ಪುತ್ತೂರು ಹಾಗೂ ಫಯಿನಾ ಚುನಾವಣೆ ನಡೆಸಿಕೊಟ್ಟರು.ವುಮೆನ್ ಇಂಡಿಯಾ ಮೂವ್ಮೆಂಟ್ ಬೆಳ್ತಂಗಡಿ ಇದರ ನೂತನ ಅಧ್ಯಕ್ಷರಾಗಿ ಶಮಾ ಉಜಿರೆ, ಕಾರ್ಯದರ್ಶಿಯಾಗಿ ಆಯಿಶಾ ಸುನ್ನತ್ ಕೆರೆ, ಉಪಾಧ್ಯಕ್ಷರಾಗಿ ತಸ್ಲೀಮಾ ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಅಝ್ಮಿಯಾ ಕುಂಟಿನಿ, ಕೋಶಾಧಿಕಾರಿಯಾಗಿ ಹಸೀನಾ ಬೆಳ್ತಂಗಡಿ ಸಮಿತಿ ಸದಸ್ಯರಾಗಿ ಸೌದಾ ಬೆಳ್ತಂಗಡಿ, ಅಶಿಕಾ ಚಾರ್ಮಾಡಿ, ಸುಮಯ್ಯ ಬಳ್ಳಮಂಜ, ಅಝ್ವಿನಾ ಚಾರ್ಮಾಡಿ, ನಸೀಮಾ ಬೆಳ್ತಂಗಡಿ, ಮರಿಯಮ್ಮ ಆಯ್ಕೆಯಾದರು.