BELTHANGADI
ಮುರೋಡಿ – ವಿವಾಹಿತ ಮಹಿಳೆಯ ನಿಗೂಢ ಸಾವು

ಮುರೋಡಿ ಜುಲೈ 29: ವಿವಾಹಿತ ಮಹಿಳೆಯೊಬ್ಬರು ವಿಪರೀತ ಹೊಟ್ಟೆನೊವೆಂದು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ಮರೋಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ,
ಮೃತರನ್ನು ಪಚ್ಚಡಿ ಮನೆಯ ಮೂಕಾಂಬಿಕಾ ನಿಲಯದ ನಿವಾಸಿ ವಾಣಿಶ್ರೀ (26) ಎಂದು ಗುರುತಿಸಲಾಗಿದೆ. ವಾಣಿಶ್ರೀ ಅವರ ವಿವಾಹ ಒಂದು ವರ್ಷಗಳ ಹಿಂದೆ ಪ್ರಶಾಂತ್ ಅವರ ಜೊತೆ ನಡೆದಿತ್ತು.
ವಾಣಿಶ್ರೀ ಅವರು ಶುಕ್ರವಾರ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪಕ್ಕದ ಮನೆಯಲ್ಲಿದ್ದ ಅವರ ದೊಡ್ಡಮ್ಮನಿಗೆ ಅನುಮಾನ ಬಂದು ಕೂಡಲೇ ವಾಣಿಶ್ರೀ ಪತಿ ಪ್ರಶಾಂತ್‌ಗೆ ಕರೆ ಮಾಡಿದ್ದಾರೆ.

ತಕ್ಷಣವೇ ಕುಟುಂಬದ ಮಂದಿ ವಾಣಿಶ್ರೀ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಈ ಪ್ರಕರಣ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ.