Connect with us

    LATEST NEWS

    ಮತ್ತೆ 108 ಆಂಬ್ಯುಲೆನ್ಸ್ ನಲ್ಲಿ ಹೆತ್ತ ಮಹಿಳೆ

    ಮತ್ತೆ 108 ಆಂಬ್ಯುಲೆನ್ಸ್ ನಲ್ಲಿ ಹೆತ್ತ ಮಹಿಳೆ

     

    ಮಂಗಳೂರು ಸೆಪ್ಟೆಂಬರ್ 28: ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವರು 108 ಆಂಬ್ಯುಲೆನ್ಸ್ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ‌ ನೀಡಿದ ಘಟನೆ ಕಡಬದಲ್ಲಿ ನಡೆದಿದೆ.

    ಕೋಡಿಂಬಾಳ ಗ್ರಾಮದ ದಂಡುಗುರಿ ನಿವಾಸಿ ರವೀಂದ್ರ ಎಂಬವರ ಪತ್ನಿ ಭವಾನಿ ಎಂಬವರು ಇಂದು ಮುಂಜಾನೆ ಹೆರಿಗೆ ನೋವು ಕಂಡು ಬಂದ ಕಾರಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದರು. ದಾಖಲಾಗಿ ತಾಸು ಕಳೆದರೂ ವೈದ್ಯರು ಅಗಮಿಸದ ಕಾರಣ ದಾದಿಯರು ಕೊನೆಯ ಕ್ಷಣದಲ್ಲಿ ತುರ್ತಾಗಿ ಪುತ್ತೂರಿಗೆ ತೆರಳಲು ಸೂಚಿಸಿದರೆನ್ನಲಾಗಿದೆ‌.

    ಈ ಹಿನ್ನೆಲೆಯಲ್ಲಿ ತಕ್ಷಣವೇ 108 ಆಂಬ್ಯುಲೆನ್ಸ್ ಮೂಲಕ ಪುತ್ತೂರಿಗೆ ಕೊಂಡೊಯ್ಯುತ್ತಿದ್ದಾಗ ಪದವು ಎಂಬಲ್ಲಿ ಭವಾನಿಯವರು ಹೆಣ್ಣು ಮಗುವಿಗೆ ಜನ್ಮ‌ ನೀಡಿದ್ದಾರೆ. ತಾಯಿ ಮತ್ತು ಮಗು ಇದೀಗ ಆರೋಗ್ಯದಿಂದಿದ್ದಾರೆ. ಮಗು ಹಾಗು ತಾಯಿ ಯನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಭವಾನಿಯವರ ಮೊದಲನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿತ್ತು. ಇದೀಗ ಎರಡನೇ ಹೆರಿಗೆಯೂ 108 ಆಂಬ್ಯುಲೆನ್ಸ್ ನಲ್ಲೇ ಆಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *