ಪ್ರಯಾಗ್ರಾಜ್, ಅಕ್ಟೋಬರ್ 21: ಮದುವೆಯಾಗುವುದಾಗಿ ನಂಬಿಸಿ ಆಕೆಯ ಜತೆ ಸಂಬಂಧ ಬೆಳೆಸಿ ಬಳಿಕ ಕೈಕೊಟ್ಟಿದ್ದಕ್ಕೆ ಮಹಿಳೆಯೊಬ್ಬಳು ಮೈದುನನ ಖಾಸಗಿ ಭಾಗವನ್ನು ಕತ್ತರಿಸಿರುವ ಘಟನೆ ಪ್ರಯಾಗ್ರಾಜ್ನಲ್ಲಿ ನಡೆದಿದೆ. ಈ ಘಟನೆ ಬಳಿಕ ಮಹಿಳೆಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ದೀಪಾವಳಿಯಂದು ದೆಹಲಿಯ ಬೇಕರಿಯಲ್ಲಿ ‘ಬೇಸನ್ ಲಡ್ಡು’ ತಯಾರಿಸಿದ ರಾಹುಲ್ ಗಾಂಧಿ
ಅಕ್ಟೋಬರ್ 16ರ ರಾತ್ರಿ ಮೌಯಿಮಾದ ಮಲ್ಖಾನ್ಪುರ ಗ್ರಾಮದ ರಾಮ್ ಅಸರೆ ಅವರ ಪುತ್ರ 20 ವರ್ಷದ ಉಮೇಶ್ ತನ್ನ ಕೋಣೆಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ದ. ಅವನ ಕಿರುಚಾಟದಿಂದ ಎಚ್ಚರಗೊಂಡ ಅವನ ಕುಟುಂಬ ಸದಸ್ಯರು ಧಾವಿಸಿ ಬಂದಾಗ ಅವನು ನೋವಿನಿಂದ ನರಳುತ್ತಿದ್ದ, ತೀವ್ರವಾದ ಇರಿತದ ಗಾಯಗಳಾಗಿದ್ದು ಮತ್ತು ಅವನ ಖಾಸಗಿ ಭಾಗಗಳು ಕತ್ತರಿಸಿದ್ದು ಕಂಡುಬಂದಿತ್ತು.ಸಿ.ಎಂ ಸಿದ್ದರಾಮಯ್ಯ ಭಾಗವಹಿಸಿದ “ಅಶೋಕ ಜನಮನ” ಕಾರ್ಯಕ್ರಮದಲ್ಲಿ ನೂಕು ನುಗ್ಗಲು: 11ಕ್ಕೂ ಹೆಚ್ಚು ಜನ ಅಸ್ವಸ್ಥ.
ಕುಟುಂಬವು ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು, ಬಳಿಕ ಪೊಲೀಸರಿಗೆ ದೂರು ನೀಡಲಾಯಿತು. ನಂತರ ನಡೆದ ತನಿಖೆಯು ಉದ್ವಿಗ್ನ ಮತ್ತು ಗೊಂದಲಮಯವಾಗಿತ್ತು ಏಕೆಂದರೆ ಆರಂಭದಲ್ಲಿ ಅಂತಹ ಕೃತ್ಯವನ್ನು ಯಾರು ಮಾಡಿದ್ದಾರೆ ಅಥವಾ ಏಕೆ ಮಾಡಿದ್ದಾರೆಂದು ಯಾರಿಗೂ ಅರ್ಥವಾಗಲಿಲ್ಲ. ಪೊಲೀಸರು ಆಳವಾಗಿ ತನಿಖೆ ನಡೆಸುತ್ತಿದ್ದಂತೆ, ಸತ್ಯ ಹೊರಬಂದಿತ್ತು. ಉಮೇಶ್ನ ಅಣ್ಣ ಉದಯ್, ಮಂಜುಳನ್ನು ಮದುವೆಯಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ, ಉಮೇಶ್ ಮಂಜುಳ ತಂಗಿಯೊಂದಿಗೆ ಸಂಬಂಧವನ್ನು ಬೆಳೆಸಿಕೊಂಡಿದ್ದ. ಇಬ್ಬರೂ ಆತ್ಮೀಯರಾಗಿದ್ದರು ಮತ್ತು ಪರಸ್ಪರ ಮದುವೆಯಾಗುವುದಾಗಿಯೂ ಹೇಳಿದ್ದರು.
ಅಂತಿಮವಾಗಿ, ಉಮೇಶ್ ಆ ಸಂಬಂಧದಿಂದ ಹಿಂದೆ ಸರಿದಿದ್ದ, ವರದಿಯ ಪ್ರಕಾರ, ಇನ್ನೊಬ್ಬಳನ್ನು ಇಷ್ಟ ಪಡುತ್ತಿದ್ದ, ಇದು ಮಂಜುಳನ ತಂಗಿಯ ಮೇಲೆ ತೀವ್ರ ಪರಿಣಾಮ ಬೀರಿತ್ತು. ಕುಟುಂಬ ಸದಸ್ಯರ ಪ್ರಕಾರ ಆಕೆ ಖಿನ್ನೆತೆಗೆ ಒಳಗಾಗಿದ್ದಳು. ಒಂಟಿಯಾಗಿರಲು ಶುರು ಮಾಡಿದ್ದಳು. ಇದನ್ನು ಕಂಡ ಮಂಜುಳಾಗೆ ಕೋಪ ಬಂದಿತ್ತು. ತನ್ನ ಮೈದುನನಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಹೇಳಿ ಆತನ ಮೇಲೆ ಹಲ್ಲೆ ನಡೆಸಿ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ.