LATEST NEWS
ಸಿಎಂಗೆ ಹೂಗುಚ್ಚ ನೀಡಲು ಮಹಿಳಾ ನಾಯಕಿಯರ ಪೈಪೋಟಿ…!!

ಮಂಗಳೂರು ಅಗಸ್ಟ್ 01: ಸಿಎಂ ಆದ ಬಳಿಕ ಮೊದಲ ಬಾರಿಗೆ ಮಂಗಳೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಹೂವಿನ ಬೊಕ್ಕೆ ನೀಡಲು ಮಹಿಳಾ ನಾಯಕಿಯರು ಕಿತ್ತಾಡಿಕೊಂಡ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ.
ವಿಮಾನ ನಿಲ್ದಾಣದಿಂದ ಬಂದು ಕಾರಿನಲ್ಲಿ ಕೂತಿದ್ದ ಸಿಎಂ ಗೆ ಸ್ವಾಗತ ಕೋರಲು ಹೂಗುಚ್ಚ ಹಿಡಿದುಕೊಂಡ ಬಂದಿದ್ದ ಮಹಿಳಾ ಮುಖಂಡರು ತೆರಳಿದ್ದಾರೆ. ಕಾರ್ ನಲ್ಲಿ ಕೂತಿದ್ದ ಸಿಎಂ ಗೆ ಬೊಕ್ಕೆ ನೀಡುತ್ತಿದ್ದ ಮಹಿಳಾ ಕಾಂಗ್ರೆಸ್ ಮುಖಂಡೆ ಶಾಲೆಟ್ ಪಿಂಟೋ ಆದರೆ ಈ ವೇಳೆ ಮಾಜಿ ಮೇಯರ್ ಕವಿತಾ ಸನಿಲ್ ಅಡ್ಡ ಬಂದಿದ್ದಾರೆ. ಈ ವೇಳೆ ಕವಿತಾ ಸನಿಲ್ ರನ್ನು ಶಾಲೆಟ್ ಪಿಂಟೋ ತಳ್ಳಿ ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ಮಹಿಳಾ ಮುಖಂಡ ಜಗಳ ನೋಡಿ ಆಶ್ಚರ್ಯಗೊಂಡ ಸಿಎಂ, ಜಗಳ ನೋಡುತ್ತಾ ತೆರಳಿದ್ದಾರೆ.
