LATEST NEWS
ಭೂಮಿಗೆ ಸುರಕ್ಷಿತವಾಗಿ ಮರಳಿದ ಸುನಿತಾ ವಿಲಿಯಮ್ಸ್

ಅಮೇರಿಕಾ ಮಾರ್ಚ್ 19: ಬೋಯಿಂಗ್ ಸ್ಟಾರ್ ಲೈನರ್ ನಲ್ಲಿ ಬಾಹ್ಯಾಕಾಶಕ್ಕೆ ತೆರಳಿ ಅಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುನಿತಾ ವಿಲಿಯಮ್ಸ್ 9 ತಿಂಗಳ ನಂತರ ಇದೀ ಸೇಫ್ ಆಗಿ ಮರಳಿದ್ದಾರೆ. ಸ್ಪೇಸ್ ಎಕ್ಸ್ ಮತ್ತು ನಾಶಾ ಜಂಟಿ ಕಾರ್ಯಾಚರಣೆಯಲ್ಲಿ ಅಮೆರಿಕದ ನಾಸಾ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ನೋರ್ ಸೇರಿದಂತೆ ನಾಲ್ವರು ಗಗನಯಾತ್ರಿಗಳು ಸುರಕ್ಷಿತವಾಗಿ ಇಂದು ಮುಂಜಾನೆ ಭೂಮಿಗೆ ಬಂದಿಳಿದ್ದಾರೆ.
ಗಗನಯಾನಿಗಳು ಇದ್ದ ಸ್ಪೇಸ್ ಎಕ್ಸ್ ಕಂಪನಿಯ ಡ್ರಾಗನ್ ಕ್ಯಾಪ್ಸಲ್ ಅಮೆರಿಕದ ಪ್ಲೋರಿಡಾ ಕರಾವಳಿಯಲ್ಲಿ ಸುರಕ್ಷಿತವಾಗಿ ಬಂದಿಳಿಯಿತು.
ಕಳೆದ ವರ್ಷ ಜೂನ್ 5ರಂದು ಬೋಯಿಂಗ್‌ನ ಸ್ಟಾರ್‌ಲಿಂಕ್ ಗಗನನೌಕೆಯಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್‌ಎಸ್) ತೆರಳಿದ್ದ ಕ್ರೂ-9 ಮಿಷನ್‌ನ ಸಿಬ್ಬಂದಿಗಳಾದ ಸುನಿತಾ ಮತ್ತು ಬುಚ್, ಗಗನನೌಕೆಯಲ್ಲಿ ತಲೆದೋರಿದ ತಾಂತ್ರಿಕ ದೋಷದಿಂದಾಗಿ 9 ತಿಂಗಳಿಗೂ ಹೆಚ್ಚು ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಳ್ಳಬೇಕಾಯಿತು.

ಸುನಿತಾ ಮತ್ತು ಬುಚ್ ಅವರನ್ನು ಭುವಿಗೆ ತರಲು ಜಂಟಿಯಾಗಿ ಯೋಜನೆ ರೂಪಿಸಿದ್ದ ನಾಸಾ ಮತ್ತು ಸ್ಪೇಸ್‌ಎಕ್ಸ್, ಭಾನುವಾರ ನಾಲ್ವರು ಗಗನಯಾತ್ರಿಗಳನ್ನೊಗಳಗೊಂಡ ಕ್ರೂ-10 ಮಿಷನ್‌ನ ‘ಡ್ರಾಗನ್’ ಗಗನನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸಿತ್ತು. ಇದೀಗ ‘ಡ್ರಾಗನ್’ ಸುನಿತಾ-ಬುಚ್ ಅವರನ್ನು ಭೂಮಿಗೆ ಮರಳಿ ಕರೆತರುವಲ್ಲಿ ಯಶಸ್ವಿಯಾಗಿದೆ.