DAKSHINA KANNADA
ಕೊನೆಗೂ ಸೆರೆಸಿಕ್ಕ ನರಹಂತಕ ಕಾಡಾನೆ
ಪುತ್ತೂರು ಫೆಬ್ರವರಿ 23: ಕಡಬದ ರೆಂಜಿಲಾಡಿ ಗ್ರಾಮದ ಮೀನಾಡಿ ಎಂಬಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಕೊನೆಗೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ದಿನಗಳಿಂದ ನರಹಂತಕ ಆನೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳೀಯರು ಸೇರಿದಂತೆ 100ಕ್ಕೂ ಅಧಿಕ ಮಂದಿ ಹುಡುಕಾಟ ನಡೆಸಿದ್ದರು, ಇಂದು ಆನೆ ಸುಬ್ರಹ್ಮಣ್ಯ ಅರಣ್ಯ ವಲಯದ ಕೊಂಬಾರು ಸಮೀಪದ ಮಂಡೆಕರ ಕಾಡಿನಲ್ಲಿ ಸೆರೆಯಾಗಿದೆ.
ಕಾಡಾನೆಯನ್ನು ಅರಿವಳಿಕೆ ಚುಚ್ಚುಮದ್ದು ಕೊಟ್ಟು ಹಿಡಿಯಲಾಗಿದ್ದು, ಕಾಡಾನೆ ಸೆರೆಸಿಕ್ಕ ಸ್ಥಳದಲ್ಲಿ ಅರಣ್ಯ ಇಲಾಖೆಯ ಐದು ಸಾಕಾನೆಗಳು ಬೀಡು ಬಿಟ್ಟಿವೆ. ಸದ್ಯ ಆನೆ ಸೆರೆಸಿಕ್ಕ ಜಾಗಕ್ಕೆ ರಸ್ತೆ ನಿರ್ಮಿಸಿ ನೀರಿನ ಟ್ಯಾಂಕರ್, ಕ್ರೇನ್ ರವಾನಿಸಲು ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಆನೆ ಸೆರೆಸಿಕ್ಕ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರಕ್ಕೆ ನಿಷೇಧಿಸಲಾಗಿದೆ.
ರಾತ್ರಿ ವೇಳೆ ಸೆರೆಯಾದ ಕಾಡಾನೆಯನ್ನು ಲಾರಿ ಮೂಲಕ ಮೈಸೂರಿಗೆ ರವಾನಿಸಲಾಗಿದೆ.